ಕೊರೊನಾ ವೈರಸ್  ರೋಗ ನಿರೋಧ ಶಕ್ತಿ ಹೆಚ್ಚಿಸುವ ಹಣ್ಣು, ತರಕಾರಿಗಳು ಯಾವುದು ಗೊತ್ತಾ ..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಕೊರೊನಾ ವೈರಸ್ ಆಹಾರಶೈಲಿ ಬದಲಾಗಿದೆ. ಜನರು ಆಹಾರವನ್ನು ತುಂಬಾ ಎಚ್ಚರಿಕೆ ವಹಿಸಿ ತಿನ್ನುತ್ತಿದ್ದಾರೆ.   ಅದರಲ್ಲೂ ಇಮ್ಯೂನಿಟಿ ಪವರ್, (ರೋಗ ನಿರೋಧಕ ಶಕ್ತಿ)  ಹೆಚ್ಚಿಸುವ ಆಹಾರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಇನ್ನು ಭಾರತದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕೂಡ ವಿಟಮಿನ್ ಸಿ ಇರುವ ಆಹಾರಗಳನ್ನು ತಿನ್ನುವಂತೆ ಸಲಹೆ ನೀಡಿದೆ. ವಿಟಮಿನ್ ಸಿ ಆಹಾರಗಳು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ವಿಟಮಿನ್ ಸಿ ಅಧಿಕವಿರುವ ಆಹಾರಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸಲಹೆ ಈ ರೀತಿ ಇದೆ.

ನಲ್ಲಿಕಾಯಿ:ನೆಲ್ಲಿಕಾಯಿಯಲ್ಲಿ ಅನೇಕ ಆರೋಗ್ಯವರ್ಧಕ ಗುಣಗಳಿವೆ. ನೆಲ್ಲಿಕಾಯಿ ತಿನ್ನುವುದರಿಂದ ರಕ್ತ ಶುದ್ಧವಾಗುವುದು, ಅಲ್ಲದೆ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುವುದು, ದಿನದಲ್ಲಿ ಒಂದು ನೆಲ್ಲಿಕಾಯಿ ತಿನ್ನಿ ಅಥವಾ ಆಮ್ಲ ಜ್ಯೂಸ್ ಕೂಡ ಕುಡಿಯಬಹುದು. ನೆಲ್ಲಿಕಾಯಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆಯಾಗುವುದು.

fresh indian gooseberries 28436147

ಕಿತ್ತಳೆ

ಕಿತ್ತಳೆಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಪ್ರಮಾಣ ಕಡಿಮೆಯಿದ್ದು, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಇದರಲ್ಲಿ ನಾರಿನಂಶ, ವಿಟಮಿನ್ಸ್, ಫೋಲೆಟ್, ಪೊಟಾಷ್ಯಿಯಂ ಅಧಿಕವಿದೆ. ಕಿತ್ತಳೆಯಲ್ಲಿರುವ ವಿಟಮಿನ್ ಸಿ ದೇಹವನ್ನು ಇತರ ರೋಗಗಳಿಂದ ರಕ್ಷಣೆ ಮಾಡುತ್ತದೆ. ಕಿತ್ತಳೆಯನ್ನು ಹಾಗೇ ತಿನ್ನಿ, ಇಲ್ಲಾ ಜ್ಯೂಸ್ ಮಾಡಿ ಕುಡಿಯಬಹುದು.

Why is orange known as golden apple. Does it have any nutritious benefits.

ಪಪ್ಪಾಯಿ

ಪಪ್ಪಾಯಿ ಕೂಡ ತುಂಬಾ ಆರೋಗ್ಯಕರ. ಇದು ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತದೆ, ಇನ್ನು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಪಪ್ಪಾಯಿ ತಿನ್ನುವುದರಿಂದ ತ್ವಚೆ ಕೂಡ ಚೆನ್ನಾಗಿರುತ್ತದೆ. ಬೆಳಗ್ಗೆ ಒಂದು ಬೌಲ್ ಪಪ್ಪಾಯಿ ಹಣ್ಣು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.

25 1490422709 papayaseedsandhoney 28 1493361312

ಕ್ಯಾಪ್ಸಿಕಂ

ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಅಧಿಕವಿದೆ, ಅಲ್ಲದೆ ಇದರಲ್ಲಿ ಆಂಟಿಆಕ್ಸಿಡೆಂಟ್, ವಿಟಮಿನ್ ಇ, ವಿಟಮನ್ ಎ, ನಾರಿನಂಶ, ಖನಿಜಾಂಶ, ಫೋಲೆಟ್, ಪೊಟಾಷ್ಯಿಯಂ ಅಂಶವಿದೆ. ಕ್ಯಾಪ್ಸಿಕಂ ರಕ್ತಹೀನತೆ ತಡೆಗಟ್ಟುತ್ತದೆ, ಅಲ್ಲದೆ ಇದರಲ್ಲಿ ವಿಟಮಿನ್ ಸಿ ಇದ್ದು, ಇದು ಆಹಾರದಲ್ಲಿರುವ ಕಬ್ಬಿಣದಂಶ ನಮ್ಮ ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

1586870196933

ಸೀಬೆಕಾಯಿ

ಆಹಾರದಲ್ಲಿ ಸೀಬೆಕಾಯಿ ತಪ್ಪದೇ ಸೇರಿಸಿ, ಏಕೆಂದರೆ ಸೀಬೆಕಾಯಿ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುವಲ್ಲಿ ತುಂಬಾನೇ ಸಹಕಾರಿ, ಅಲ್ಲದೆ ಹೊಟ್ಟೆ ಸಂಬಂಧಿಸಿ ಸಮಸ್ಯೆಗಳನ್ನು ತಡೆಗಟ್ಟುತ್ತದೆ, ಹೃದಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ಪೊಟಾಷ್ಯಿಯಂ ಹಾಗೂ ನಾರಿನಂಶವಿದೆ.

06 1409981824 4 im

ನಿಂಬೆ ರಸ

ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿಯುವ ಅಭ್ಯಾಸ ತುಂಬಾನೇ ಒಳ್ಳೆಯದು. ಇದರಿಂದ ತೂಕ ನಿಯಂತ್ರಣವಾಗುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ನಿಂಬೆರಸ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಜೀರ್ಣಕ್ರಿಯೆಗೆ ಸಹಕಾರಿ. ಅಲ್ಲದೆ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ತಡಗಟ್ಟುವಲ್ಲಿಯೂ ಸಹಕಾರಿ. ನಿಂಬೆರಸ ದೇಹದಲ್ಲಿ ಠಿಊ ಪ್ರಮಾಣ ನಿಯಂತ್ರಣದಲ್ಲಿಡುತ್ತದೆ.

FG how to make lemon water

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *