ಡಿವಿಜಿಸುದ್ದಿ.ಕಾಂ,ಹರಿಹರ: ಇಂದಿರಾ ಕ್ಯಾಂಟೀನ್ ಹಾಗೂ ವಾಲ್ಲೀಕಿ ಜಯಂತಿ ಉದ್ಘಾಟನೆ ಸಮಾರಂಭಕ್ಕೆ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ಅವರು ಅ.13 ರಂದು ಹರಿಹಕ್ಕೆ ಆಗಮಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಹಸಿವು ಮುಕ್ತ ಕರ್ನಾಟಕ ಮಾಡುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಹರಿಹರದಲ್ಲಿ ಅ.13 ರಿಂದ ಚಾಲನೆ ಸಿಗಲಿದೆ. ಮಿನಿವಿಧಾನಸೌದ ಬಳಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್ ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಬೆಳಿಗ್ಗೆ 10.30 ಕ್ಕೆ ಪಕ್ಕಿರಸ್ವಾಮಿ ಮಠದಿಂದ ತೆರದ ವಾಹನದಲ್ಲಿ ಸಿದ್ದರಾಮಯ್ಯ ಮೆರವಣಿಗೆ ಮೂಲಕ ಹಳೆ ಪಿ.ಬಿ ರಸ್ತೆಯ ಬೃಹತ್ ವೇದಿಕೆಗೆ ಕರೆತರಲಾಗುವುದು ಎಂದರು.
ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರಾದ ಜಮೀರ್ ಅಹ್ಮದ್, ಹೆಚ್. ಆಂಜನೇಯ, ಎಸ್.ಎಸ್.ಮಲ್ಲಿಕಾರ್ಜುನ, ಎಂ.ಎಲ್.ಸಿ ಅಬ್ದುಲ್ ಜಬ್ಬಾರ್, ಮೋಹನ್ ಕೊಂಡಜ್ಜಿ, ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಭಾಗವಹಿಸಲಿದ್ದು, ಶಾಸಕ ಎಸ್. ರಾಮಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಸಭಾ ಸದಸ್ಯ ಎಸ್.ಎಂ. ವಸಂತ, ನಾಗರತ್ನಮ್ಮ, ಶಂಕರ್ ಖಟಾವಕರ್, ಜಿ.ಪಂ ಮಾಜಿ ಸದಸ್ಯ ಎನ್. ನಾಗೇಂದ್ರಪ್ಪ, ಮುಖಂಡರಾದ ಬಿ.ರೇವಣಸಿದ್ದಪ್ಪ, ಗೀತಾ ಕದರಮಂಡಲಗಿ, ನಿಖಿಲ್ ಕೊಂಡಜ್ಜಿ, ಅಮರಾವತಿ ರೇವಣಸಿದ್ದಪ್ಪ ಭಾಗ್ಯದೇವಿ, ವಿದ್ಯಾರಾಣಿ ಉಪಸ್ಥಿತರಿದ್ದರು.



