ಡಿವಿಜಿಸುದ್ದಿ.ಕಾಂ, ಹರಿಹರ : ಹರಿಹರ ನಗರ ಸೇರಿದಂತೆ ತಾಲ್ಲೂಕಿನ ಬೆಳ್ಳೂಡಿ, ಜಿಗಳಿ, ಹಳ್ಳಿಯಾಳ ಗ್ರಾಮಗಳಲ್ಲಿ 40 ಲಕ್ಷ ರೂಪಾಯಿ ಅನುದಾನದ ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ಎಸ್. ರಾಮಪ್ಪ ಭೂಮಿ ಪೂಜೆ ನೆರವೇರಿಸಿದರು.
ನಗರದ ಬಹಾರ್ ಮಕಾನ್ ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಅನುದಾನದಲ್ಲಿ 12 ಲಕ್ಷ ಚರಂಡಿ ಹಾಗೂ ಸಿಸಿ ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಶಾಸಕ ರಾಮಪ್ಪ, ಈ ಬಡಾವಣೆಯಲ್ಲಿ ನಗರಸಭೆ ಸದಸ್ಯರು ಬೇರೆ ಪಕ್ಷದವರದ್ದು ಇಲ್ಲಿನ ಅಭಿವೃದ್ಧಿಗೆ ನಾನು ಯಾವುದೇ ತಡೆ ಹಾಕುವುದಿಲ್ಲ. ಯಾವುದೇ ಪಕ್ಷದ ಸದಸ್ಯರಿದ್ದರೂ ಸಹ ನಗರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.ನಿಮ್ಮ ಬಡಾವಣೆಯ ಯಾವುದೇ ಸಮಸ್ಯೆಗಳಿದ್ದರೂ ನನ್ನ ಬಳಿ ನೇರವಾಗಿ ಬಂದು ಪರಿಹಾರಿಸಿಕೊಡಲು ಸಿದ್ಧ ಎಂದು ಆಶ್ವಾಸನೆ ನೀಡಿದರು.
ಮುಖಂಡರಾದ ಅಮರಾವತಿ ರೇವಣಸಿದ್ದಪ್ಪ,ನಗರಸಭೆ ಸದಸ್ಯೆ ರೇಷ್ಮಾ ಜಾಕಿರ್, ನಸುರುಲ್ಲಾ ಮಕಾಂದಾರ್,ಸನಾವುಲ್ಲಾ ಮುಲ್ಲಾ, ಶಫಿವುಲ್ಲಾ ಮಕಾಂದಾರ್, ಜಿಯಾವುಲ್ಲಾ, ತಮ್ಮಣ್ಣ, ಬಾಬು ಸೇಠ್, ಅಮಾನುಲ್ಲಾ ಖಾನ್, ಅಬ್ದುಲ್ ಶಾಹೀದ್, ಅಬ್ದುಲ್ ರೆಹಮಾನ್, ಆರಿಫುಲ್ಲಾ ಮುಂತಾದವರು ಉಪಸ್ಥಿತರಿದ್ದರು.



