ಡಿವಿಜಿ ಸುದ್ದಿ, ಹರಿಹರ: ನಿನ್ನೆ ರಾತ್ರಿ ಏಕಕಾಲಕ್ಕೆ ತಾಲ್ಲೂಕಿನ ಪಿಎಲ್‌ಡಿ ಬ್ಯಾಂಕ್ ಮತ್ತು ಜನತಾ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ನಲ್ಲಿ ದರೋಡೆ ನಡೆದಿದೆ. ಪಿಎಲ್‌ಡಿ ಬ್ಯಾಂಕಿನಲ್ಲಿ 7 ಲಕ್ಷ ಹಣವಿದ್ದ ಟ್ರಜರಿ ಅಪಹರಣ ಯತ್ನ ವಿಫಲವಾಗಿದ್ದು, ಸೌಹಾರ್ದ ಸಹಕಾರಿ ನಿಯಮಿತದಲ್ಲಿ 97 ಸಾವಿರ ರೂಪಾಯಿಯನ್ನು ದರೋಡೆಕೋರರು ದೋಚಿದ ಘಟನೆ ನಡೆದಿದೆ.

ಒಂದೇ ಕಟ್ಟಡದಲ್ಲಿದ್ದ ಎರಡು ಬ್ಯಾಂಕ್ ಗಳಿದ್ದು, ಪಕ್ಕದಲ್ಲಿದ್ದ ಚರ್ಚ್ ಕಟ್ಟಡದ ಮೂಲಕ ಬ್ಯಾಂಕ್ ಕಟ್ಟಡಕ್ಕೆ ಪ್ರವೇಶ ಪಡೆದ ಕಳ್ಳರು, 1ನೇ ಮಹಡಿಯಲ್ಲಿ ಜನತಾ ಸೌಹಾರ್ದ ಸಹಕಾರಿ ನಿಯಮಿತ ಹಾಗೂ 2ನೇ ಮಹಡಿಯಲ್ಲಿ ಪಿಎಲ್‌ಡಿ ಬ್ಯಾಂಕ್ ಕಳತನಕ್ಕೆ ನಡೆಸಿದ್ದಾರೆ.

ಪಿಎಲ್‌ಡಿ ಬ್ಯಾಂಕಿನ 7 ಲಕ್ಷ ಹಣವಿದ್ದ ಟ್ರಜರಿ ಸಾಗಿಸಲು ಯತ್ನ ನಡೆಸಿದ್ದಾರೆ. ಅದು ಸಾಧ್ಯವಾಗದಿದ್ದಾಗ ಅಲ್ಲೇ ಬಿಟ್ಟು ಹೋಗಿದ್ದಾರೆ. ಆದ್ರೆ, ಸೌಹಾರ್ದ ಬ್ಯಾಂಕ್ ನಲ್ಲಿ 97 ಸಾವಿರ ಹಣ ಕಳ್ಳತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಶ್ವಾನ ದಳ, ಬೆರಳಚ್ಚು ತಜ್ಞರಿಂದ ಪರಶೀಲನೆ ನಡೆಯುತ್ತಿದೆ.



