ಡಿವಿಜಿ ಸುದ್ದಿ, ಉಚ್ಚಂಗಿದುರ್ಗ: ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಬುಧವಾರ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಭಕ್ತರ ಕಾಣಿಕೆಯಾಗಿ 15,43,333 ರೂಪಾಯಿ ಹಾಗೂ ಶ್ರೀ ಕ್ಷೇತ್ರ ಉಚ್ಚೆಂಗೆಮ್ಮ ದೇವಿ ದಾಸೋಹ ಕಾರ್ಯಕ್ರಮಕ್ಕೆ ಮೀಸಲಿಟ್ಟ ಪ್ರತ್ಯೇಕ ಹುಂಡಿ ಎಣಿಕೆಯಲ್ಲಿ 1,67,017 ರೂಪಾಯಿಗಳು ಸಂಗ್ರಹವಾಗಿದೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ದಿನಗಳಲ್ಲಿ ದಾಸೋಹ ನಡೆಸಲಾಗುತ್ತದೆ. ಆದರೆ ಕೊರೊನ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ದಾಸೋಹ ಕಾರ್ಯವನ್ನು ಸರಕಾರದ ಮುಂದಿನ ಸೂಚನೆವರೆಗೂ ಸ್ಥಗಿತಗೊಳಿಸಲಾಗಿದೆ ಎಂದು ಉಪತಹಸೀಲ್ದಾರ್ ಫಾತಿಮಾ ತಿಳಿಸಿದ್ದಾರೆ.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ರ ವರೆಗೆ ನಡೆದ ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ, ಕಂದಾಯ ಇಲಾಖೆ, ದೇವಸ್ಥಾನದ ಸಿಬ್ಬಂದಿಗಳು ಎಣಿಕೆಯಲ್ಲಿ ತೊಡಗಿದ್ದರು.ಉಚ್ಚೆಂಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಸಿಬ್ಬಂದಿ ಶಾಂತಮ್ಮ, ಉಪ ತಹಶೀಲ್ದಾರ್ ಫಾತಿಮಾ, ಬ್ಯಾಂಕ್ ವ್ಯವಸ್ಥಾಪಕ ಸೋಮಶೇಖರ್, ಸಿಬ್ಬಂದಿ ರಾಘವೇಂದ್ರ, ಮಲ್ಲಿಕಾರ್ಜುನ ಪೊಲೀಸ್ ಇಲಾಖೆ ರಾಮಚಂದ್ರಪ್ಪ, ರವಿ ಕುಮಾರ್, ಹನುಮಂತನಾಯ್ಕ ಮುಜರಾಯಿ ಇಲಾಖೆ ಗುಮಾಸ್ತ ರಮೇಶ್,ಗ್ರಾಮಲೆಕ್ಕದಿಕಾರಿಗಳಾದ ಮಂಜುನಾಥ್, ಶ್ರೀಕಾಂತ್,ದೇವಿಯ ಅರ್ಚಕರು ಉಪಸ್ಥಿತರಿದ್ದರು.



