ಡಿವಿಜಿ ಸುದ್ದಿ, ಹರಪನಹಳ್ಳಿ : ತಾಲೂಕಿನ ಅರಸೀಕೆರೆ ಗ್ರಾಮದ ಪದವಿಪೂರ್ವ ಹಾಸ್ಟೆಲ್ ನಲ್ಲಿ ಶುದ್ಧ ಕುಡಿಯುವ ನೀರು, ಊಟದ ವ್ಯವಸ್ಥೆ,ಸ್ವಚ್ಛತೆ, ಶೌಚಾಲಯ ಸ್ವಚ್ಛತೆ, ಸೋಲಾರ್ ರಿಪೇರಿ, ಕಿಟ್ ವಿತರಣೆ ವಿಳಂಬ ಖಂಡಿಸಿ ಸಂಸದ ವೈ.ದೇವೇಂದ್ರಪ್ಪ ರವರಿಗೆ ದೂರು ಸಲ್ಲಿಸಿದ್ದರು.
ಹಾಸ್ಟೆಲ್ ನಲ್ಲಿ ಸರಿಯಾದ ಸಮಯಕ್ಕೆ ಊಟ ಕೊಡುತ್ತಿಲ್ಲ, ಅವ್ಯವಸ್ಥೆಯಿಂದ ಕೂಡಿದೆ. ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ, ಈ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳು ದೊರಕುತ್ತಿಲ್ಲ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
ದೂರನ್ನು ಸ್ವೀಕರಿಸಿ ಸಂಬಂಧಪಟ್ಟ ತಾಲ್ಲೂಕಿನ ಸಮಾಜ ಕಲ್ಯಾಣ ಅಧಿಕಾರಿ ಆನಂದ್ ಡೊಳ್ಳಿನ್, ಹಾಸ್ಟೆಲ್ ವಾರ್ಡನ್ ಗೋಪಾಲ್ ರವರಿಗೆ ತರಾಟೆ ತೆಗೆದುಕೊಂಡರು.
ಅಡುಗೆ ಸಿಬ್ಬಂದಿಯವರು ಸರಿಯಾದ ಸಮಯಕ್ಕೆ ಊಟ, ತಿಂಡಿ ಕೊಡುತ್ತಿಲ್ಲ.ಆದಕಾರಣ ಅಡುಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ. ನಾನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷನಾಗಿದ್ದಾಗ 1996 ರಲ್ಲಿ ಅರಸೀಕೆರೆಗೆ ಎಸ್ಸಿ,ಎಸ್ಟಿ. ಹಾಸ್ಟೆಲ್ ಪ್ರಾರಂಭಮಾಡಿದ್ದೇನೆ. ಈ ಹಾಸ್ಟೆಲ್ ಗೆ ಯಾವುದೇ ಅವ್ಯವಸ್ಥೆ ಕಂಡುಬಂದಲ್ಲಿ ಉಗ್ರ ಕ್ರಮ ಕೈಗೊಳ್ಳಲಾಗುವುದೆಂದು ಸಂಸದರಾದ ವೈ.ದೇವೇಂದ್ರಪ್ಪನವರು ಎಚ್ಚರಿಕೆ ನೀಡಿದರು.
ಅಡುಗೆ ಸಿಬ್ಬಂದಿ ಸರಿಯಾದ ಸಮಯಕ್ಕೆ ತಿಂಡಿ, ಊಟ ಕೊಡುತ್ತಿಲ್ಲ. ಅನೇಕ ಸಲ ಎಚ್ಚರಿಸಿದರು ಪ್ರಯೋಜನವಾಗಲಿಲ್ಲ. ಅಡುಗೆ ಸಿಬ್ಬಂದಿಯವರನ್ನು ವರ್ಗಾವಣೆ ಮಾಡಿದರೆ ವ್ಯವಸ್ಥೆ ಸರಿಯಾಗುತ್ತದೆ ಎಂದು ಸಮಾಜ ಕಲ್ಯಾಣ ಅಧಿಕಾರಿಯಾದ ಆನಂದ್ ಡೊಳ್ಳಿನ್ ರವರು ಹೇಳಿದರು.
ಮುಖಂಡರಾದ ವೈ. ಡಿ. ಅಣ್ಣಪ್ಪ, ಸಲಾo ಸಾಹೇಬ್. ಷಣ್ಮುಖಪ್ಪ, ಪರಶುರಾಮ್, ದೊಡ್ಡ ಹನುಮಂತಪ್ಪ, ಪರಸಪ್ಪ,ವಿದ್ಯಾರ್ಥಿಗಳು, ಮುಂತಾದವರು ಹಾಜರಿದ್ದರು.