ಡಿವಿಜಿಸುದ್ದಿ.ಕಾಂ, ಹರಪನಹಳ್ಳಿ: ಕುತ್ತಿಗೆ ನೇಣು ಬಿಗಿದುಕೊಂಡಿರುವ ಕೊಳೆತ ಸ್ಥಿತಿಯಲ್ಲಿ ಅನಾಮಧೇಯ ಶವವೊಂದು ತಾಲೂಕಿನ ಹುಲಿಕಟ್ಟಿ ಗ್ರಾಮದ ಜಮೀನಿನಲ್ಲಿ ಪತ್ತೆಯಾಗಿದೆ.
ಹುಲಿಕಟ್ಟಿ ಗ್ರಾಮದ ಗೋಣೆಪ್ಪ ಎಂಬುವವರ ಜಮೀನಿನ ತುಗ್ಗು ಪ್ರದೇಶದ ಮರದಲ್ಲಿ ತಲೆಯ ಬುರಡೆ ನೇತಾಡುವ ಸ್ಥಿತಿಯಲ್ಲಿತ್ತು.ಹಗ್ಗದಿಂದ ನೇಣು ಹಾಕಿಕೊಂಡಿದ್ದು, ವ್ಯಕ್ತಿಯ ದೇಹವು ಸಂಪೂರ್ಣ ಕೊಳೆತು ಹೋಗಿದೆ. ತಲೆಯ ಬುರಡೆ ಮಾತ್ರ ಮರದಲ್ಲಿ ನೇತಾಡುತ್ತಿದ್ದು, ದೇಹವು ನೆಲದ ಮೇಲೆ ಬಿದ್ದಿದೆ.

ದೇಹದ ಮೇಲೆ ಹಸಿರು ಮತ್ತು ಬಿಳಿ ಮಿಶ್ರಿತ ಶರ್ಟ್, ನಶೆ ಬಣ್ಣದ ಬನಿಯನ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಇದೆ. ದೇಹವು ಸುಮಾರು 30ರಿಂದ 35 ವರ್ಷದ ಗಂಡಸಿನ ಶವ ಎಂದು ಅಂದಾಜಿಸಲಾಗಿದೆ. ಈ ಕುರಿತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



