Connect with us

Dvg Suddi-Kannada News

ನಾನು ಪಂಚಮಸಾಲಿ ಸಮಾಜದ ಜೊತೆ ಇದ್ದೇನೆ: ಡಿ.ಕೆ. ಶಿವಕುಮಾರ್

ಪ್ರಮುಖ ಸುದ್ದಿ

ನಾನು ಪಂಚಮಸಾಲಿ ಸಮಾಜದ ಜೊತೆ ಇದ್ದೇನೆ: ಡಿ.ಕೆ. ಶಿವಕುಮಾರ್

ಡಿವಿಜಿ ಸುದ್ದಿ, ದಾವಣಗೆರೆ: ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ದೆಹಲಿಗೆ ಹೋಗಿದ್ದೇನೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗಿತ್ತು. ಆದರೆ, ನಾವೆಲ್ಲ ಶ್ರೀ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಪೀಠದ ಜೊತೆ ಇದ್ದೇವೆ.  ಬಹಳ ದೊಡ್ಡದಾದ ಪಂಚಮಸಾಲಿ ಸಮಾಜಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎನ್ನುವ ಸಲುವಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಹರಿಹರದ  ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಹರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಸಮಾಜದ ಒಳಿತಿಗಾಗಿ ಸ್ವಾಮೀಜಿಗಳು ಕೆಲವು ಸಲ ರಾಜಕಾಣಿಗಳ ಮೇಲೆ ಒತ್ತಡ ಹಾಕುವುದು ಸಹಜ. ರಾಜಕಾರಣಿಗಳು ಸಹ ಮಠಗಳನ್ನು ತಮ್ಮ ಅನುಕೂಲಕ್ಕಾಗಿ ಉಪಯೋಗಿಸಿಕೊಂಡಿದ್ದೇವೆ.  ರಾಜಕಾರಣಿಗಳಾದ ನಾವುಗಳು ಸ್ವಾಮೀಜಿಗಳು ಹೇಳುವ ಮಾತನ್ನು ತಾಳ್ಮೆಯಿಂದ ಆಲಿಸಬೇಕು. ಅಧಿಕಾರ ಇದೆ ಅಂತಾ ಕೇಳುತ್ತಾರೆ. ಅಧಿಕಾರ ಇಲ್ಲದಿದ್ದರೆ ಯಾರು ಕೇಳುವುದಿಲ್ಲ  ಎನ್ನುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು.

ಸ್ವಾಮೀಜಿ ಅವರೇ ನೀವು ಬೇಜಾರು ಮಾಡಿಕೊಳ್ಳಬೇಡಿ. ನೀವು ದಿಟ್ಟ ಸಂಕಲ್ಪ ಮಾಡಿದ್ದೀರಿ.  ನೀವು ಆತ್ಮವಿಶ್ವಾಸ, ಧೈರ್ಯ ಕಳೆದುಕೊಳ್ಳಬೇಡಿ. ನಿಮ್ಮ ಕೆಲಸವನ್ನು ನೀವು ಮಾಡಿದ್ದೀರಿ. ನೀವು ಇದೇ ರೀತಿ ಧೀರ್ಘ ಕಾಲ ಸಮಾಜ ಮುನ್ನೆಡೆಸಿಕೊಂಡು ಹೋಗಬೇಕು. ಭಕ್ತ ಮತ್ತು ದೇವರ ನಡುವೆ ಪೂಜಾರಿ ಇರುವಂತೆ. ದೇವರು ಮತ್ತು ಜನರ ನಡುವೆ ಸ್ವಾಮೀಜಿ ಅವರನ್ನು ಇದ್ದಾರೆ. ಈ ಮೂಲಕ ಸಮಾಜ ತಿದ್ದುವ ಕೆಲಸ ಮಾಡಬೇಕು ಎಂದರು.

ರಾಜಕಾರಣದದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ನಾನು ಈ ಹಿಂದೆ ಹೇಳಿದ್ದೆ. ಹೀಗಾಗಿ ದೇಶಕ್ಕೆ ಏನೇ ಸಮಸ್ಯೆ ಬಂದರೂ ನಮ್ಮ ಸಂಸ್ಕೃತಿ, ಆಚಾರ ವಿಚಾರ ತಿಳಿಸಿದ ಮಠ ಮಾನ್ಯಗಳು ದೊಡ್ಡವು ಎಂದರು.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

 • ಪ್ರಮುಖ ಸುದ್ದಿ

  ಸೋಮವಾರ ರಾಶಿ ಭವಿಷ್ಯ

  By

  ಈ ರಾಶಿಯವರಿಗೆ ಸಂಗಾತಿಯ ಭಾವನೆಗಳಲ್ಲಿ ವ್ಯತ್ಯಾಸ! ವ್ಯಾಪಾರದಲ್ಲಿ ಸಮೃದ್ಧಿ! ಸೋಮವಾರ ರಾಶಿ ಭವಿಷ್ಯ-ಮೇ-17,2021 ಸೂರ್ಯೋದಯ: 05:52 AM, ಸೂರ್ಯಸ್ತ : 06:36...

 • ಪ್ರಮುಖ ಸುದ್ದಿ

  ದಾವಣಗೆರೆ: ದಾಖಲೆಯ1155 ಕೊರೊನಾ ಪಾಸಿಟಿವ್ ; 414 ಡಿಸ್ಚಾರ್ಜ್ , ಒಂದು ಸಾವು

  By

  ದಾವಣಗೆರೆ: ಜಿಲ್ಲೆಯಲ್ಲಿಂದು ದಾಖಲೆಯ 1155 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 414 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ದಾವಣಗೆರೆ 631...

 • ಪ್ರಮುಖ ಸುದ್ದಿ

  ಭಾನುವಾರ ರಾಶಿ ಭವಿಷ್ಯ

  By

  ಈ ರಾಶಿಯವರಿಗೆ ಆಕಸ್ಮಿಕ ಹಣ ಲಾಭ ಗಳಿಸುವ ಸಾಧ್ಯತೆ ಇದೆ! ಉದ್ಯೋಗದಲ್ಲಿ ಅಡಚಣೆ ಸಂಭವ! ಭಾನುವಾರರಾಶಿ ಭವಿಷ್ಯ -ಮೇ-16,2021 ಸೂರ್ಯೋದಯ: 05:52...

 • ದಾವಣಗೆರೆ

  ದಾವಣಗೆರೆ: ಮೇ. 20ಕ್ಕೆ ಭದ್ರಾ ನಾಲೆ ನೀರು ಸ್ಥಗಿತ

  By

  ದಾವಣಗೆರೆ: ಭದ್ರಾ ಜಲಾಶಯದಿಂದ ನೀರು ಸ್ಥಗಿತಗೊಳಿಸುವ ನಿರ್ಧಾರವನ್ನು ಕಾಡಾ ಮುಂದೂಡಿ, ಮೇ.20 ರವರೆಗೆ ನೀರು ಹರಿಸಲು ನಿರ್ಧರಿಸಿದೆ ಎಂದು ಭದ್ರಾ ಕಾಡಾ...

 • ಪ್ರಮುಖ ಸುದ್ದಿ

  ಶನಿವಾರ ರಾಶಿ ಭವಿಷ್ಯ

  By

  ಈ ರಾಶಿಯವರಿಗೆ ಕುಟುಂಬದೊಂದಿಗೆ ವಿರಸ ಮನಸ್ತಾಪ ಕಂಡುಬರಲಿದೆ! ಹಣಕಾಸಿನ ತೊಂದರೆ ನಿವಾರಣೆಯಾಗಲಿದೆ! ಶನಿವಾರ ರಾಶಿ ಭವಿಷ್ಯ-ಮೇ-15,2021 ಸೂರ್ಯೋದಯ: 05:53 AM, ಸೂರ್ಯಸ್ತ:...

 • ಪ್ರಮುಖ ಸುದ್ದಿ

  ಶುಕ್ರವಾರ ರಾಶಿ ಭವಿಷ್ಯ

  By

  ಶುಕ್ರವಾರ ರಾಶಿ ಭವಿಷ್ಯ ಮೇ-14,2021 ಪರಶುರಾಮ ಜಯಂತಿ , ಅಕ್ಷಯ ತೃತೀಯಾ , ಬಸವ ಜಯಂತಿ ಸೂರ್ಯೋದಯ: 05:53 AM, ಸೂರ್ಯಸ್ತ:...

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top