Connect with us

Dvg Suddi-Kannada News

ಸಿಇಟಿ, ನೀಟ್ ಪರೀಕ್ಷೆ ಸಿದ್ಧತೆಗೆ ಆನ್ ಲೈನ್ ಆಧರಿತ ‘ಗೆಟ್‌ಸೆಟ್‌ಗೊ’ ತರಬೇತಿಗೆ ಚಾಲನೆ

ಪ್ರಮುಖ ಸುದ್ದಿ

ಸಿಇಟಿ, ನೀಟ್ ಪರೀಕ್ಷೆ ಸಿದ್ಧತೆಗೆ ಆನ್ ಲೈನ್ ಆಧರಿತ ‘ಗೆಟ್‌ಸೆಟ್‌ಗೊ’ ತರಬೇತಿಗೆ ಚಾಲನೆ

ಡಿವಿಜಿ ಸುದ್ದಿ, ಬೆಂಗಳೂರುಈ ಬಾರಿಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ–ನೀಟ್) ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಸೂಕ್ತ ಮಾರ್ಗದರ್ಶನ ದೃಷ್ಠಿಯಿಂದ  ರಾಜ್ಯ ಸರ್ಕಾರ  ಆನ್ ಲೈನ್ ಆಧರಿತ ‘ಗೆಟ್‌ಸೆಟ್‌ಗೊ’ (GetCETGo) ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ  ಚಾಲನೆ ನೀಡಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ  ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ,  ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಉಪಸ್ಥಿತರಿದ್ದರು.

ಇಡೀ ದೇಶದಾದ್ಯಂತ ಲಾಕ್‌ಡೌನ್‌ ನಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ  ವಿದ್ಯಾರ್ಥಿಗಳು ವಿಶೇ‍‍‍‍ಷ ತರಗತಿ ಹಾಗೂ ಕೋಚಿಂಗ್‌ ಕ್ಲಾಸ್‌ಗಳಿಗೆ ಹೋಗಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರರೆ. ಇಂತಹ  ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ  ಸಹಕಾರ ನೀಡಲು  ಉನ್ನತ ಶಿಕ್ಷಣ ಇಲಾಖೆ ‘ಗೆಟ್‌ಸೆಟ್‌ಗೊ’ ಆನ್‌ಲೈನ್‌ ಉಚಿತ ಕೋರ್ಸ್‌ ಆರಂಭಿಸಿದೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅನುಕೂಲಕ್ಕೆ ಇಂತಹ  ಕಾರ್ಯಕ್ರಮ ರೂಪಿಸಲಾಗಿದ್ದು, ರಾಜ್ಯದ ಒಟ್ಟು 1. 94 ಲಕ್ಷ ವಿದ್ಯಾರ್ಥಿಗಳು ವಿಶೇಷವಾಗಿ ಬಡ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದು. ರಾಷ್ಟ್ರಮಟ್ಟದಲ್ಲಿ ನೀಟ್‌ ಪರೀಕ್ಷೆ ಬರೆಯುವ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ  ಶೇ15 ಸೀಟ್‌ ಲಭ್ಯವಿದ್ದು, ಈ ಉತ್ತಮ ಅವಕಾಶ ಪಡೆದುಕೊಳ್ಳಲು ಅನುಕೂಲವಾಗುವಂತೆ  ನಮ್ಮ ವಿದ್ಯಾರ್ಥಿಗಳಿಗೆ ಸರ್ಕಾರ ಆನ್‌ಲೈನ್‌ ತರಬೇತಿಯ ಸೌಕರ್ಯ ಕಲ್ಪಿಸಿದೆ ಎಂದು ಉಪಮುಖ್ಯಮಂತ್ರಿ  ಅಶ್ವತ್ಥನಾರಾಯಣ ತಿಳಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಒಟ್ಟು 80 ಲಕ್ಷ ಖರ್ಚಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ಯೋಜನೆ ರೂಪಿಸಲು ಪ್ರೋತ್ಸಾಹ ಕೊಟ್ಟು, ನೆರವಾದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಳೆದ 5 ತಿಂಗಳಿಂದ ಇದರ ತಯಾರಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅದು ವಿದ್ಯಾರ್ಥಿಗಳ ನೆರವಿಗೆ ಬಂದಿದೆ  ಎಂದರು.

ಕೆಸಿಇಟಿ – 2020 ಪರೀಕ್ಷೆಗೆ ಹೆಸರು ನೋಂದಾಯಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ ಈ ಆನ್‌ಲೈನ್‌ ಕೋರ್ಸ್‌ ಉಚಿತವಾಗಿ ಲಭ್ಯವಾಗಲಿದೆ.

1) getcetgo.in ವೆಬ್ ಪೋರ್ಟಲ್ (ಗೂಗಲ್ ನಲ್ಲಿ )

2)   ಗೂಗಲ್‌ ಪ್ಲೇಸ್ಟೋರ್‌ ನ ಆ್ಯಂಡ್ರಾಯ್ಡ್‌ ಆ್ಯಪ್‌  GetCETGo

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top