ಡಿವಿಜಿಸುದ್ದಿ, ಚನ್ನಗಿರಿ : ಒಂದೆಡೆ ಕರೆ ಕೋಡಿ ಬಿದ್ದ ಪರಿಣಾಮ ಬೆಳೆಗಳಿಗೆ ಹಾನಿ ಆಗುತ್ತಿದ್ದರೆ, ಮತ್ತೊಂದೆಡೆ ಕೋಡಿಯ ಬಳಿ ಮೀನು ಹಿಡಿಯಲು ನೂಕುನುಗ್ಗಲು ಉಂಟಾಗಿತ್ತು.
ಈ ದೃಶ್ಯಗಳು ಕಂಡುಬಂದಿದ್ದು ತಾಲೂಕಿನ ಕೋಗಲೂರು ಕೆರೆ ದೊಡ್ಡಯಲ್ಲಿ. ಕೋಡಿ ಬಿದ್ದ ಪರಿಣಾಮ ಕೆರೆಯಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದ್ದು, ಕೆರೆಯಿಂದ ನೀರು ಹೋಗುತ್ತಿರುವುದರ ಜೊತೆಗೆ ಮೀನುಗಳು ಹರಿದು ಹೋಗುತ್ತಿದ್ದವು. ಈ ಮೀನುಗಳನ್ನು ಹಿಡಿಯಲು ಗ್ರಾಮಸ್ಥರು ಸೊಳ್ಳೆ ಪರದೆಯಲ್ಲಿ ಹಿಡಿದು ಮುಗಿ ಬಿದ್ದಿದ್ದರು.
ಭದ್ರ ನಾಲೆಯ ನೀರಿನಿಂದ ಸದಾ ತುಂಬಿರುತ್ತಿದ್ದ ಕೋಗಲೂರು ಕೆರೆಯಭಾಗದಲ್ಲಿ ಈ ಸಲ ಭಾರೀ ಮಳೆ ಸುರಿದಿದ್ದರಿಂದ ಕೆರೆ ಕೋಡಿಯು ಬಿದ್ದು ಹೋಗಿದೆ.



