ಡಿವಿಜಿ ಸುದ್ದಿ, ಕೂಡ್ಲಿಗಿ: ಈಗೋ ಆಗೋ..ಬೀಳುವಸ್ಥಿತಿಯಲ್ಲಿರುವ ಕಟ್ಟಡ. ಆತಂಕದಲ್ಲಿ ದಿನ ಕಳೆಯುತ್ತಿರುವ ವಿದ್ಯಾರ್ಥಿಗಳು.. ಇದು ಬಳ್ಳಾರಿ ಜಿಲ್ಲೆ ಕೊಡ್ಲಿಗಿ ತಾಲೂಕಿನ ಕಂದಗಲ್ಲು ತಿಮ್ಮಲಾಪುರ ಗ್ರಾಮದಲ್ಲಿರುವ ಸಕಾ೯ರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಗತಿ.
ಕಟ್ಟಡ ತುಂಬಾ ಹಳೆಯದಾಗಿದ್ದು, ಬೀಳುವ ಸ್ಥಿತಿಯಲ್ಲಿದೆ. ಈ ಶಾಲೆ ಅಂಗನವಾಡಿ ಕಟ್ಟಡಕ್ಕೂ ಹೊಂದಿಕೊಂಡಿದ್ದು. ಶಿಕ್ಷಕರು ಮತ್ತು ಪೋಷಕರು ತೀರಾ ಆತಂಕ ಪಡುವ ಸ್ಥಿತಿ ನಿಮಾ೯ಣವಾಗಿದೆ. ಸಂಪೂಣ೯ ಶಿಥಿಲಗೊಂಡಿರುವ ಹಳೇ ಸಕಾ೯ರಿ ಶಾಲಾಕಟ್ಟಡವಾಗಿದ್ದು.ಶಾಲಾ ವಿದ್ಯಾಥಿ೯ಗಳನ್ನು ಬಲಿ ತಗೆದುಕೊಳ್ಳಲು ಬಾಯಿತೆರೆದುಕೊಂಡ ಭೂತದಂತೆ ಭಾಸವಾಗುತ್ತಿದೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಅನುಪಯುಕ್ತವಾಗಿರುವ ಈ ಕಟ್ಟಡವನ್ನು ತೆರವುಗೊಳಿಸುವಂತೆ ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳು ತಮ್ಮ ನಿಯಮಾನುಸಾರ ಸಂಬಂಧಿಸಿದ ತೆರವು ಗೊಳಿಸುವ ಹೊಣೆಹೊತ್ತಿರುವ ಇಲಾಖಾಧಿಕಾರಿಗೆ ಕಳೆದ 8 ತಿಂಗಳ ಹಿಂದೆಯೇ ಆದೇಶ ಹೊರಡಿಸಿದ್ದಾರಾದರೂ ಇದುವರೆಗೂ ತೆರವುಗೊಳಿಸಿಲ್ಲ. ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲದಂತಾಗಿದೆ.
ಶಿಥಿಲಾವಸ್ಥೆಯಲ್ಲಿರುವ ಈ ಶಾಲೆ ಮಕ್ಕಳು, ಪೋಷಕರಿಗೆ ಹಾಗೂ ಶಿಕಕ್ಷಕರಿಗೆ ತೀರಾ ಸಮಸ್ಯೆಯಾಗಿದೆ. ಕಟ್ಟಡ ತೆರವುಗೊಳಿಸಲು ಕೆಲ ರಾಜಕಾರಣಿಗಳ ಹಾಗು ಗ್ರಾಮಸ್ಥರ ನಡುವಿನ ಒಣ ಪ್ರತಿಷ್ಠೆ ಕಾರಣವೆನ್ನಲಾಗುತ್ತಿದೆ. ಕೆಲವು ಸ್ಥಳೀಯರು ಮಕ್ಕಳು ಬಲಿಯಾದರೂ ಪರವಾಗಿಲ್ಲ ಕಟ್ಟಡ ತೆರವುಗೊಳಿಸಲು ಬಿಡೋಲ್ಲವೆಂದು ಹಠ ಹಿಡಿದಿದ್ದಾರೆ. ಈ ವಿವಾದ ಹಿಂದೆ ಪ್ರಭಾವಿ ರಾಜಕಾರಣಿ ಕೈವಾಡವಿದೆ ಎನ್ನುತ್ತಾರೆ ಗ್ರಾಮಸ್ಥರು.
ಸಂಬಂಧಿಸಿದಂತೆ ಕೆಲವು ಶಿಕ್ಷಣ ಪ್ರೇಮಿಗಳು ಹಾಗೂ ಮಕ್ಕಳ ಪೋಷಕರು ಜಿಲ್ಲಾ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಗುನ್ನಳ್ಳಿ ರಾಘವೇಂದ್ರ ರವರ ನೇತೃದಲ್ಲಿ ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಸಮಾಲೊಚನೆ ನಡೆಸಿದ್ದು, ಮಕ್ಕಳ ಹಿತದೃಷ್ಟಿಯಿಂದ ಶೀಘ್ರವೇ ಕ್ರಮಕ್ಕೆ ಒತ್ತಾಯಿಸಿದ್ದಾರೆ.



