ಡಿವಿಜಿ ಸುದ್ದಿ, ನಾಗ್ಪುರ: ದಾವಣಗೆರೆ ಜಿಲ್ಲೆಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮಹಾರಾಷ್ಟ್ರದ ನಾಗ್ಪುರದ ದೀಕ್ಷಾ ಭೂಮಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 63 ನೇ ಪರಿನಿಬ್ಬಾಣ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರತಿ ವರ್ಷ ದಾವಣಗೆರೆಯಲ್ಲಿ ಡಾ ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನಾಚರಣೆ ಆಚರಿಸಲಾಗುತಿತ್ತು. ಆದರೆ, ಈ ಬಾರಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಪಂಚಾಯಿತಿ ಅಧಿಕಾರಿಗಳ ಸಹಕಾರದಿಂದ ಈ ಪುಣ್ಯಕ್ಷೇತ್ರದ ದರ್ಶನ ಮಾಡಿದ್ದಾರೆ.

ಈ ಕ್ಷೇತ್ರದ ದರ್ಶನದಿಂದ ನಮ್ಮ ಜೀವನ ಪಾವನವಾಯಿತು ಎಂದು ಡಿಎಸ್ಎಸ್ ದಾವಣಗೆರೆ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಹೇಳಿದರು. ಡಿಎಸ್ಎಸ್ ಹಿರಿಯ ಮುಖಂಡರಾದ ಸತ್ತಪ್ಪ ಗೌರಿಪುರ, ಕೋಗಲೂರು ಕುಮಾರ್, ವಿಜಯಮ್ಮ , ಗಿರಿಜಮ್ಮ , ಜಿಗಳಿ ಹಾಲೇಶ್ , ಪರಮೇಶ್ , ಮಂಜು , ಸೇರಿದಂತೆ ಒಟ್ಟು 24 ಸದಸ್ಯರು ನಾಗ್ಪುರದ ದೀಕ್ಷಾ ಭೂಮಿಗೆ ಭೇಟಿ ನೀಡಿದ್ದಾರೆ.



