ಡಿವಿಜಿ ಸುದ್ದಿ, ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಭಾಗಿಯಾದ ಆರೋಪ ಹಿನ್ನೆಲೆ ಸ್ಟಾರ್ ದಂಪತಿ ದಿಗಂತ್- ಐಂದ್ರಿತಾ ರೇ ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗಿರುವ ಇಬ್ಬರನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತೆ ಎಂಬ ಮಾಹಿತಿ ಲಭ್ಯವಾಗಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ದಂಪತಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ನೋಟಿಸ್ ನೀಡಿದ ವೇಳೆ ದಿಗಂತ್ ಮತ್ತು ಐಂದ್ರಿತಾ ಕೇರಳದಲ್ಲಿದ್ರೂ ಎಂದು ಹೇಳಲಾಗಿತ್ತು. ಇಂದು ಬೆಳಗ್ಗೆ ದಂಪತಿ ಬೆಂಗಳೂರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದಾರೆ.

ಇನ್ಸ್ ಪೆಕ್ಟರ್ ಅಂಜುಮಾಲಾ ಅವರು ಐಂದ್ರಿತಾ ರೇ ವಿಚಾರಣೆಯನ್ನು ಫಸ್ಟ್ ಫ್ಲೋರ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಇನ್ನು ದಿಗಂತ್ ಅವರನ್ನು ಗ್ರೌಂಡ್ ಫ್ಲೋರ್ ನಲ್ಲಿ ಎಸಿಪಿ ಗೌತಮ್ ಹಾಗೂ ಇನ್ಸ್ ಪೆಕ್ಟರ್ ಪುನೀತ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.



