ಡಿವಿಜಿ ಸುದ್ದಿ, ಬೆಂಗಳೂರು: ಡ್ರಗ್ ಮಾಫಿಯಾದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಸಿನಿ ನಟ, ನಟಿಯರು ಹಾಗೂ ಇತರರಿಗೆ ಡ್ರಗ್ ಪೂರೈಸುತ್ತಿದ್ದ ಆಫ್ರಿಕಾದ ಲೌಮ್ ಪೆಪ್ಪೆರ್ ಸಾಂಬಾ ಎಂಬಾತನನ್ನು ಬಂಧಿಸಿದ್ದಾರೆ.
ಡ್ರಗ್ ಮಾಫಿಯಾದಲ್ಲಿ ಭಾಗಿ ಆಗಿರುವ ಆರೋಪದ ಮೇಲೆ ನಟಿ ರಾಗಿಣಿ, ಅವರ ಸ್ನೇಹಿತ ರವಿ ಶಂಕರ್ ಸೇರಿದಂತೆ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಬಂಧಿತ ಆರೋಪಿಗಳು ಕೊಟ್ಟ ಮಾಹಿತಿ ಆಧಾರಿಸಿ, ಸಿಸಿಬಿ ಪೊಲೀಸರು ಆಫ್ರಿಕಾ ಪ್ರಜೆಯನ್ನು ಬಂಧಿಸಿದ್ದಾರೆ.
ಆರೋಪಿ ರವಿ ಶಂಕರ್ ಹಾಗೂ ಕೆಲವರಿಗೆ ಡ್ರಗ್ ಸರಬರಾಜು ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಮಾಹಿತಿ ನೀಡಿದ್ದಾರೆ.



