ಡಿವಿಜಿ ಸುದ್ದಿ, ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಹಿನ್ನೆಲೆ ಸ್ಯಾಂಡಲ್ ವುಡ್ ನಟಿ ರಾಗಿಣಿ ದಿಗ್ವೇದಿ ಯನ್ನು ಸಿಸಿಬಿ ಪೊಲೀಸರ್ ಬಂಧಿಸಿದ್ದಾರೆ.
ರಾಗಿಣಿ ದಿಗ್ವೇದಿ ಅವರ ಆಪ್ತ ರವಿಶಂಕರ್ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಸಿಸಿಬಿ ನೋಟಿಸ್ ನೀಡಿತ್ತು. ಬೆಳಗ್ಗೆ ಸಿಸಿಬಿ ರಾಗಿಣಿ ಮನೆ ಮೇಲೆ ದಾಳಿ ಮಾಡಿ, ಸಿಸಿಬಿ ಕಚೇರಿಗೆ ಕರೆ ತರಲಾಗಿತ್ತು. ಮಧ್ಯಾಹ್ನ 12 ಗಂಟೆಯಿಂದ ಸುದೀರ್ಘ ವಿಚಾರಣೆ ನಡೆಸಲಾಗಿತ್ತು. 7 ಗಂಟೆಗಳ ಕಾಲ ವಿಚಾರಣೆ ನಡೆಸಿ ಇದೀಗ ಬಂಧಿಸಲಾಗಿದೆ.

ಡ್ರಗ್ಸ್ ಮಾಫಿಯಾ ವಿಚಾರವಾಗಿ ಸಿಸಿಬಿ, ಹೆಚ್ಚಿನ ವಿಚಾರಣೆ ನಡೆಸಲು ರಾಗಿಣಿಯನ್ನು ವಶಕ್ಕೆ ಪಡೆಯಲಾಗಿದೆ. ಆರ್ ಟಿಓ ಕಚೇರಿಯಲ್ಲಿ ವರ್ಕ್ ಮಾಡುತ್ತಿದ್ದ ರವಿಶಂಕರ್ , ರಾಗಿಣಿ ಅವರ ಆಪ್ತನಾಗಿದ್ದ. ಆತನ ವಿಚಾರಣೆ ವೇಳೆ ರಾಗಿಣಿ ಹೆಸರು ಬಾಯಿಬಿಟ್ಟಿದ್ದನು.
ಇನ್ಸ್ ಪೆಕ್ಟರ್ ಅಂಜುಮಾಲಾ ನಾಯಕ್, ಡಿಸಿಪಿ ರವಿಕುಮಾರ್, ಎಸಿಪಿ ಗೌತಮ್ ವಿಚಾರಣೆ ನಡೆಸುತ್ತಿದ್ದರು. 5 ರಿಂದ 7 ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.



