Connect with us

Dvgsuddi Kannada | online news portal | Kannada news online

ದಿನದ ಯೋಗ :ಶ್ವಾಸನಾಳ, ಗಂಟಲು ಬೇನೆ ನಿವಾರಿಸುವ ‘ಸರ್ವಾಂಗಾಸನ’

ಪ್ರಮುಖ ಸುದ್ದಿ

ದಿನದ ಯೋಗ :ಶ್ವಾಸನಾಳ, ಗಂಟಲು ಬೇನೆ ನಿವಾರಿಸುವ ‘ಸರ್ವಾಂಗಾಸನ’

 

  • ಜಿ. ಎನ್ ಶಿವಕುಮಾರ್

ಯೋಗ(yoga) ದಲ್ಲಿ ‘ಆಸನಗಳ ತಾಯಿ’ ಎನಿಸಿರುವ ಸರ್ವಾಂಗಾಸನ(sarvangasana)ದ ಅಭ್ಯಾಸ ಕ್ರಮ ಹಾಗೂ ಪ್ರಯೋಜನಗಳ ಕುರಿತು ಇಲ್ಲಿ ವಿವರಿಸಲಾಗಿದೆ.

ಶಿಷ್ಯ: ಕರೋನ ಹಾವಳಿಯಿಂದ ಲಾಕ್ ಡೌನ್ ಅಗಿ, ಮನೆಯಲ್ಲಿದ್ದೇವೆ. ಮೈ ಕೈ ಎಲ್ಲಾ ಜಡವಾಗಿದೆ. ನರ ನಾಡಿಗಳು ಸೆಳೆಯುತ್ತಿವೆ. ದೇಹವೇ ಭಾರ ಎನಿಸುತ್ತಿದೆ. ಏನೊಂದೂ ಕೆಲಸ, ಓದು ಯಾವುದರಲ್ಲೂ ಆಸಕ್ತಿ ಮೂಡುತ್ತಿಲ್ಲ. ಇದಕ್ಕೊಂದು ಪರಿಹಾರ ಸೂಚಿಸಿ. ವೈರಸ್ ದಾಳಿ ಎದುರಿಸುವ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ವಿವರಿಸಿ ಗುರುವೆ.
ಗುರು: ಮನಸ್ಸು ಮತ್ತು ದೇಹದ ಸರ್ವ ರೋಗಕ್ಕೂ ‘ಅಷ್ಟಾಂಗ ಯೋಗ’ ದಿವ್ಯ ಔಷಧ ಇದ್ದಂತೆ. ಆದ್ದರಿಂದ ನೀನು ದೇಹದ ಜಡತ್ವವನ್ನು ಕಿತ್ತೊಗೆಯಲು ಯೋಗ(yoga)ದ ಮೂರನೇ ಹಂತ ‘ಆಸನ’ದಲ್ಲಿ ವಿವರಿಸಿರುವ ವಿವಿಧ ಆಸನಗಳ ಅಭ್ಯಾಸ ನಡೆಸು.
ಶಿಷ್ಯ: ಮೊದಲು ಯಾವ ಆಸನ ಅಭ್ಯಾಸ ಮಾಡಬೇಕು? ಕ್ರಮದ ಬಗ್ಗೆ ವಿವರಿಸಿ.
ಗುರು: ‘ಆಸನಗಳ ತಾಯಿ’ ಎನಿಸಿರುವ ಸರ್ವಾಂಗಾಸನ(sarvangasana) ಕಲಿತುಕೊ. ಸರ್ವಾಂಗ ಎಂದರೆ ದೇಹದ ಎಲ್ಲಾ ಅವಯವ ಅಥವಾ ಭಾಗಗಳು. ಈ ಆಸನ ಭಂಗಿಯಿಂದ ಶರೀರದ ಎಲ್ಲಾ ಅಂಗಗಳಿಗೆ ವ್ಯಾಯಾಮ ಒದಗುವುದರಿಂದ ಸರ್ವಾಂಗಾಸನ ಎಂಬ ಹೆಸರಿದೆ. ದೇಹ, ಮನಸ್ಸಿನ ರೋಗಗಳಿಗೆ ಸಿದ್ಧೌಷಧಿಯಂತೆ ಕಾರ್ಯ ನಿರ್ವಹಿಸುವುದರಿಂದ ಇದಕ್ಕೆ ‘ಆಸನಗಳ ತಾಯಿ’ ಎಂಬ ಸ್ಥಾನವೂ ಇದೆ.
ಕೈಗಳ ಆಶ್ರಯದಿಂದ ಕುತ್ತಿಗೆ, ಭುಜಗಳ ಮೇಲೆ ನೆಲೆಸುವ ಈ ಆಸನ ಸಾಲಂಬ ಸರ್ವಾಂಗಾಸನ ಎಂದೂ ಕರೆಯಲ್ಪಡುತ್ತದೆ.

ಅಭ್ಯಾಸ ಕ್ರಮ
ಸಮತಟ್ಟಾದ ನೆಲದ ಮೇಲೆ ಜಮಖಾನ ಅಥವಾ ಮ್ಯಾಟ್, ಚಾಪೆ ಹಾಸಿ ಅಭ್ಯಾಸ ಮಾಡಬೇಕು.

ಕಾಲುಗಳನ್ನು ನೀಳವಾಗಿ ಚಾಚಿ ಬೆನ್ನು ಕೆಳಗೆ ಮಾಡಿ ಮೇಲ್ಮುಖವಾಗಿ ಮಲಗಿ. ಕೈಗಳು ತೊಡೆಯ ಪಕ್ಕ ಮೇಲ್ಮುಖವಾಗಿರಲಿ. ಮಂಡಿಗಳನನ್ನು ಕೂಡಿಸಿ, ಪಾದಗಳನ್ನು ಚೂಪಾಗಿಸಿ ಸ್ವಲ್ಪ ಬಿಗಿಗೊಳಿಸಿ. ಉಸಿರನ್ನು ಹೊರಹಾಕುತ್ತಾ ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿ. ನೆಲದಿಂದ 30 ಡಿಗ್ರಿ ಕೋನದಲ್ಲಿ 10 ಸೆಕೆಂಡು, 60 ಡಿಗ್ರಿ ಕೋನದಲ್ಲಿ 10 ಸೆಕೆಂಡು, 90 ಡಿಗ್ರಿ ಕೋನದಲ್ಲಿ 10 ಸೆಕೆಂಡು ನಿಲ್ಲಿಸಿ. ಸೊಂಟ ಭಾಗವನ್ನು ಮೇಲೆತ್ತಿ ಕಾಲುಗಳನ್ನು ತಲೆ ಇರುದ ದಿಕ್ಕಿನತ್ತ ಚಾಚಿ. ಕೈಗಳನ್ನು ಸೊಂಟಕ್ಕೆ ಆಧಾರವಾಗಿಸಿ, ಒತ್ತಿಕೊಳ್ಳುತ್ತಾ ಕಾಲುಗಳನ್ನು ಮೇಲಕ್ಕೆತ್ತಿ ನೇರವಾಗಿ ನಿಲ್ಲಿಸಿ.
ಮುಂಡಭಾಗ, ತೊಡೆ, ಮೀನುಖಂಡ, ಪಾದ ಒಂದೇ ನೇರಕ್ಕೆ ಬರುವಂತೆ ಸಮತೋಲನ ಸಾಧಿಸಿ. ಎದೆಯನ್ನು ಹಿಗ್ಗಿಸಿ ಗದ್ದಕ್ಕೆ ತಾಗುವಂತಿರಿಸಿ, ಪಾದದ ಹೆಬ್ಬೆರಳನ್ನು ನೋಡುತ್ತಾ ಗಮನ ಕೇಂದ್ರೀಕರಿಸಿ.
ಅಂತಿಮ ಸ್ಥಿತಿಯಲ್ಲಿ ಒಂದರಿಂದ ಐದು ನಿಮಿಷದವರೆಗೆ ನಿಮ್ಮ ಸಾಮರ್ಥ್ಯ ಅರಿತು ದೇಹವನ್ನು ಅತ್ತಿತ್ತ ಅಲುಗಾಡದಂತೆ ನಿಲ್ಲಿಸಿ.
ಅಂತಿಮ ಸ್ಥಿತಿ ತಲುಪಿದ ಕ್ರಮದಲ್ಲಿಯೇ ನಿಧಾನವಾಗಿ ಅವರೋಹಣ ಮಾಡಿ. ನೆಲದ ಮೇಲೆ ಕಾಲುಗಳನ್ನು ನೀಳವಾಗಿ ಚಾಚಿ ದೀರ್ಘ ಉಸಿರಾಟ ನಡೆಸಿ ಒಂದು ನಿಮಿಷ ವಿರಮಿಸಿ. ತಕ್ಷಣ ಮೇಲೇಳಬೇಡಿ.

ಪ್ರಯೋಜನಗಳು:

  • ಉಸಿರಾಟ, ಶ್ವಾಸನಾಳ ತೊಂದರೆ, ಗಂಟಲುಬೇನೆ, ವೇಗವಾದ ಎದೆಬಡಿತ, ಅರ್ಧತಲೆನೋವು ನಿವಾರಣೆ.
  • ಕುತ್ತಿಗೆ, ಗಂಟಲು ಭಾಗಕ್ಕೆ ಉತ್ತಮ ವ್ಯಾಯಾಮ ದೊರೆತು ಥೈರಾಯಿಡ್ ಹಾಗೂ ಪ್ಯಾರಾಥೈರಾಯಿಡ್ ಗ್ರಂಥಿಗಳ ಸರಿಯಾದ ಕಾರ್ಯ ನಿರ್ವಹಣೆಗೆ ನೆರವಾಗುತ್ತದೆ.
  • ದೇಹಸಂಬಂಧಿತ ಎಲ್ಲಾ ಕಾಯಿಲೆಗಳ ಪರಿಹಾರಕ್ಕೆ ಸಹಕಾರಿ. ಸರಾಗ ರಕ್ತ ಪರಿಚಲನೆ ಉಂಟಾಗಿ ಮೆದುಳಿಗೆ ಹೆಚ್ಚಿನ ಶುದ್ಧ ರಕ್ತ ಪೂರೈಕೆಗೆ ಸಹಾಯಕ.
  • ನೆನಪಿನ ಶಕ್ತಿ ಹೆಚ್ಚಳಕ್ಕೆ ಸಹಕಾರಿ.
  • ನರಗಳು ಮತ್ತು ಸ್ನಾಯು ಸೆಳೆತ ನಿವಾರಿಸಿ, ನಿರ್ನಿದ್ರೆ ಸಮಸ್ಯೆ ಇಲ್ಲವಾಗಿಸುತ್ತದೆ.
  • ಕಿಬ್ಬೊಟ್ಟೆಯ ಅಂಗಗಳ ಮೇಲೆ ಪರಿಣಾಮ, ಮೂತ್ರ ವಿಸರ್ಜನೆ ತೊಂದರೆ ಹಾಗೂ ಮಹಿಳೆಯರ ಮಾಸಿಕ ಶ್ರಾವ ತೊಂದರೆ, ಹೊಟ್ಟೆ, ಕುರುಳುಹುಣ್ಣು, ಕೊಡ್ಡಕರುಳಿನ ಊತ ನಿವಾರಣೆ.
  • ಮೂರ್ಛೆರೋಗ, ರಕ್ತಕ್ಷಯ ನಿವಾರಿಸುತ್ತದೆ.

ಸೂಚನೆ: ಹೆಚ್ಚು ರಕ್ತದೊತ್ತಡ ಸಮಸ್ಯೆ ಇರುವವರು ಹಲಾಸನದ ಸಾಧನೆ ಬಳಿಕ ಸರ್ವಾಂಗಾಸನ ಅಭ್ಯಸಿಸಬೇಕು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Shivakumara G.N. M.A, B.Ed, YIC
YOGA Instructor, International Yoga Champion
Contact/wp: 94802 25879 Email: shivugn80@gmail.com

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top