Connect with us

Dvg Suddi-Kannada News

ದೆಹಲಿಯಲ್ಲಿ ಆಪ್ ಭರ್ಜರಿ ಮುನ್ನೆಡೆ, ಮತ್ತೆ ಮುಗ್ಗರಿಸಿದ ಬಿಜೆಪಿ; ಖಾತೆ ತೆರೆಯದ ಕಾಂಗ್ರೆಸ್

ಪ್ರಮುಖ ಸುದ್ದಿ

ದೆಹಲಿಯಲ್ಲಿ ಆಪ್ ಭರ್ಜರಿ ಮುನ್ನೆಡೆ, ಮತ್ತೆ ಮುಗ್ಗರಿಸಿದ ಬಿಜೆಪಿ; ಖಾತೆ ತೆರೆಯದ ಕಾಂಗ್ರೆಸ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ಆಮ್ ಆದ್ಮಿ ಪಾರ್ಟಿ (ಆಪ್ ) 56 ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ 14 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಕಾಂಗ್ರೆಸ್ ಯಾವುದೇ ಖಾತೆಯನ್ನೇ ತೆರೆದಿಲ್ಲ. ಈ ಮೂಲಕ ಆಪ್ ಭರ್ಜರಿ ಗೆಲುವಿನತ್ತ ಮುಖ ಮಾಡಿದೆ.

ಒಟ್ಟು 70 ಕ್ಷೇತ್ರಗಳ ದೆಹಲಿ ವಿಧಾನಸಭೆಯಲ್ಲಿ ಮ್ಯಾಜಿಕ್ 36 ಆಗಿದ್ದು, ಆಪ್ 56 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಮತ್ತೆ ದೆಹಲಿ ದರ್ಬಾರ್ ನಡೆಸುವ ಸೂಚನೆ ನೀಡಿದೆ. ಈ ಬಾರಿ ಬಿಜೆಪಿ ಹೇಗಾದ್ರೂ ಮಾಡಿ ದೆಹಲಿ ಗದ್ದುಗೆ ಏರಲೇಬೇಕು ಎಂದು ನಡೆಸಿದ ಪ್ರಯತ್ನಗಳೆಲ್ಲವು ವಿಫಲವಾಗಿವೆ.

ಸದ್ಯದ ಟ್ರೆಂಡಿಂಗ್ ನಲ್ಲಿ ಆಪ್ ಸ್ಪಷ್ಟ ಬಹುಮತದತ್ತ ಮುನ್ನುಗ್ಗುತ್ತಿದ್ದು, ಇದೇ ಟ್ರಂಡ್ ಮುಂದುವರಿಸಿಕೊಂಡು ಬಂದರೆ ಆಪ್ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಲಿದೆ. ಚುನಾವಣೋತ್ತರ  ಎಲ್ಲಾ ಸಮೀಕ್ಷೆಗಳಿ ಆಪ್ ಗೆಲ್ಲಲಿವೆ ಎಂದು ಭವಿಷ್ಯ ಹೇಳಿದ್ದವು. ಅದೇ ಪ್ರಕಾರ ಆಪ್ ಭರ್ಜರಿ ಲೀಡ್ ನಲ್ಲಿದೆ. 2015ರ ಚುನಾವಣೆಯಲ್ಲಿ ಆಪ್ 67 ಕ್ಷೇತ್ರಗಳಲ್ಲಿ ಜಯಗಳಿಸಿತ್ತು ಭರ್ಜರಿ ಜಯ ದಾಖಲಿಸಿತ್ತು. ಆಗ ಬಿಜೆಪಿ ಕೇವಲ  3 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 15 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತ್ತು.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top