ಡಿವಿಜಿ ಸುದ್ದಿ, ದಾವಣಗೆರೆ: ಕೆಬಿ ಬಡಾವಣೆ 25 ನೇ ವಾರ್ಡ್ ಅಭ್ಯರ್ಥಿ ಎಸ್. ಟಿ. ವೀರೇಶ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರು.ಮನೆ ಮನೆಗೆ ತರಳಿ ಮತಯಾಚನೆ ಮಾಡುವ ಮತದಾರ ಮನವೊಲಿಸಿದರು.
ಭರ್ಜರಿ ಪ್ರಚಾರದ ನಡುವೆಯೂ ಡಿವಿಜಿ ಸುದ್ದಿ ಜೊತೆ ಮಾತನಾಡಿದ ಅವರು, ಯಾವುದೇ ಜನ ಪ್ರತಿನಿಧಿ ಭ್ರಷ್ಟಾಚಾರ ರಹಿತ ಆಡಳಿ ನೀಡಿದಾಗ ಸಮಾಜ ಸುಧಾರಣೆ ಆಗಲಿದೆ. ಹೀಗಾಗಿ ನಾನು ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಮೊದಲ ಆದ್ಯತೆ ನೀಡುತ್ತೇನೆ.

ನಾನು ಕಳೆದ 30 ವರ್ಷದಿಂದ ದಾವಣಗೆರೆಯಲ್ಲಿ ಜನಪರ ಹೋರಾಟ, ಸಂಘಟನೆಯಲ್ಲಿ ತೊಡಗಿದ್ದೇನೆ. ಈ ಸಂಘಟನೆ ಸಂದರ್ಭದಲ್ಲಿ ಜನರ ಸಂಸ್ಯೆಗಳ ಬಗ್ಗೆ ಅರಿವಿದೆ. ಹೀಗಾಗಿ ನಾನು ಪಾಲಿಕೆ ಚುನಾವಣೆಯಲ್ಲಿ ಗೆದ್ದ ನಂತರ ಜನರ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುವ ಕೆಲಸ ಮಾಡುತ್ತೇನೆ.
ದೇಶದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವಿದೆ. ಸ್ಥಳೀಯವಾಗಿಯೂ ಬಿಜೆಪಿ ಸರ್ಕಾರ ಬಂದರೆ, ಅಭಿವೃದ್ಧಿ ಕಾರ್ಯಕ್ಕೆ ಇನ್ನಷ್ಟು ವೇಗ ಬರಲಿದೆ. ನಿಟ್ಟಿನಲ್ಲಿ ಮತದಾರಿಗೆ ಬಿಜೆಪಿಗೆ ವೋಟ್ ಮಾಡುವ ಮೂಲಕ ಬಹುಮತದಿಂದ ಗೆಲ್ಲಿಸಿ ಎಂದರು.



