ಡಿವಿಜಿ ಸುದ್ದಿ, ದಾವಣಗೆರೆ: ದೇಶದಾದ್ಯಂತ ಲಾಕ್ ಡೌನ್ ಆಗಿರುವುದರಿಂದ ಜನ ಸಾಮಾನರ ದೈನಂದಿನ ಜೀವನ ಕಷ್ಟಕರವಾಗಿದೆ. ಈ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ದಾವಣಗೆರೆ ಮಹಾನಗರ ಪಾಲಿಕೆಯ 10 ನೇ ವಾರ್ಡ್ ಪಾಲಿಕೆ ಸದಸ್ಯ ರಾಕೇಶ್ ಯಶವಂತರಾವ್ ಜಾಧವ್ ಅವರು, ತಮ್ಮ ವಾರ್ಡಿನ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ನಗರದ ಪಾತಾಳಲಿಂಗೇಶ್ವರ ದೇವಸ್ಥಾನದ ಬಳಿ ವಿತರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ.ಪಾಟೀಲ್, ಸೋಗಿ ಶಾಂತಕುಮಾರ್, ದಕ್ಷಿಣ ಅಧ್ಯಕ್ಷ ಆನಂದರಾವ್ ಶಿಂಧೆ, ಜಿಲ್ಲಾ ಕಾರ್ಯದರ್ಶಿಗಾದ ಗೋಪಾಲ್ ರಾವ್ ಮಾನೆ, ಗೋವಿಂದ ರಾಜ್, ವಾರ್ಡ್ ಅಧ್ಯಕ್ಷ ಮಾಲತೇಶ್, ಕುಮಾರ್, ಎಂ.ಎನ್.ವೇಣು, ಪರುಶುರಾಮ, ಪ್ರವೀಣ್ ಜಾಧವ್, ಶಾಮನೂರ ವಿಜಯ, ನವೀನ, ರಾಮಚಂದ್ರಪ್ಪ , ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



