ಡಿವಿಜಿ ಸುದ್ದಿ, ದಾವಣಗೆರೆ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 05 ಕೆಜಿ 250 ಗ್ರಾಂ ಗಾಂಜಾ ಹಾಗೂ ಒಂದು ಇನೋವಾ ಕಾರ್ ವಶ ಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಎಸ್ ಪಿ ಹನುಮಂತರಾಯ, ಇಂದು ಹೊಳಲ್ಕೆರೆ ಕಡೆಯಿಂದ ಚನ್ನಗಿರಿ ನಗರ ಕಡೆಗೆ ಅಕ್ರಮವಾಗಿ ಗಾಂಜಾ ಹೊಂದಿದ್ದ ಇನೋವಾ ಕಾರೊಂದು ಬರುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ.

ಚನ್ನಗಿರಿ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ಪ್ರಶಾಂತ್ ಜಿ. ಮುನ್ನೋಳಿ ನೇತೃತ್ವದಲ್ಲಿ ತಾಲೂಕಿನ ಗರಗ ಕ್ರಾಸ್ ಬಳಿ ಈ ನಡೆದಿದ್ದು, 5ಮಂದಿಯನ್ನು ಬಂಧಿಸಿಸಲಾಗಿದೆ. ಬಂಧಿತರಿಂದ 10, 26,500 ರೂಪಾಯಿ ಮೌಲ್ಯದ 05 ಕೆಜಿ 250 ಗ್ರಾಂ ಗಾಂಜಾ 1 ಇನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಾದ ಶಫೀರ್ ಖಾನ್ (32), ಜಬೀವುಲ್ಲಾ (27) ಪತ್ಹಾ ಖಾನ್ (30), ತೌಸೀಫ್ ಖಾನ್ (29) ಹಾಗೂ ಚಂದ್ರಶೇಖರ್ (32) ಎಂದು ಗುರುತಿಸಲಾಗಿದೆ. ಈ ಪ್ರಕರಣ ಯಶಸ್ವಿಗೊಳಿಸಿದ ಚನ್ನಗಿರಿ ಪೊಲೀಸ್ ರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



