ಡಿವಿಜಿ ಸುದ್ದಿ, ದಾವಣಗೆರೆ: ಸೋಮೇಶ್ವರ ವಿದ್ಯಾಲಯದಲ್ಲಿ ನಾಳೆ (ಜ.10) ರಿಂದಜ.12 ವರೆಗೆ ಸೋಮೇಶ್ವರ ಉತ್ಸವ-2020 ಕಾರ್ಯಕ್ರಮ ನಡೆಯಲಿದ್ದು, ಜ.12 ರಂದು ಭಾನುವಾರ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ ಬಾಲ ಸುಬ್ರಹ್ಮಣ್ಯಂ,ಎಂ.ಡಿ ಪಲ್ಲವಿ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೆ.ಎಂ. ಸುರೇಶ್, ಜ.10 ರಂದು ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಧಿಕಾರಿ ಡಾ.ಭೀಮೇಶ್ವರ ಜೋಶಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಹಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ. ಎಚ್. ಶಿವಯೋಗಿ ಸ್ವಾಮಿ, ಡಿಡಿಪಿಐ ಸಿ.ಆರ್. ಪರಮೇಶ್ವರ್, ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಭಾಗಿಯಾಗಲಿದ್ದಾರೆ. ಜ.11 ರಂದು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಎನ್.ಇ ನಟರಾಜ್, ಜಿಲ್ಲಾ ವರದಿಗಾರಕೂಟದ ಅಧ್ಯಕ್ಷ. ಜಿ. ಆರ್. ಆರಾಧ್ಯ, ಪತ್ರಿಕೋದ್ಯಮ ವಿಭಾಗದ ರ್ಯಾಂಕ್ ವಿಜೇತೆ ಕೆ.ಎಂ ನಂದಿನಿ ಅವರಿಗೆ `ಸೋಮೇಶ್ವರ ಸಿರಿ’ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗವುದು. ಬಾಳೆ ಹೊನ್ನೂರಿನ ರಾಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿಕೊಳ್ಳಿದ್ದು, ಖ್ಯಾತ ಭಾಷಣಕಾರ ಪ್ರೊ. ಕೃಷ್ಣೇಗೌಡ ಉಪನ್ಯಾಸ ನೀಡಲಿದ್ಧಾರೆ.
2018 ನೇ ಸಾಲಿನ ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರತಿಭಾ ಪುರಸ್ಕಾರ ನೀಡಲಿದ್ಧಾರೆ. ಇದೇ ವೇಳೆ ಶ್ರೀಸತ್ಯ ಸಾಯಿ ವಿದ್ಯಾನಿಕೇತನ ಸಂಸ್ಥೆಯ ಮುಖ್ಯ ಶಿಕ್ಷಕ ಜನಗ್ನಾಥನಾಡಿಗೇರ್ ಅವರಿಗೆ `ಶಿಕ್ಷಣ ಸಿರಿ’ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತೇಜಸ್ವಿನಿ ಅವರಿಗೆ 25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಸೋಮೇಶ್ವರ ಉತ್ಸವದ ಕೊನೆಯ ದಿನ ಜ. 12 ರಂದು ಸಂಗೀತ ಉತ್ಸವ ನಡೆಯಲಿದೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಜಗಳೂರು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಸಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸಿಕೊಳ್ಳಲಿದ್ದು ಶಾಸಕ ಎಸ್.ಎ ರವೀಂದ್ರನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು .



