ಡಿವಿಜಿ ಸುದ್ದಿ, ಹರಿಹರ: ಸರ್ಕಾರ ವಿರುದ್ದ ಹೋದರೆ ನಮ್ಮ ಕೆಲಸಗಳು ಆಗಲ್ಲ. ಅವರ ಬೆನ್ನುತಟ್ಟಿ ಅವರ ಜೊತೆ ಹೋಗಬೇಕು ಎಂದು ಮಾಜಿ ಸಚಿವ , ಶಾಸಕ ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದರು.
ದಾವಣಗೆರೆ ಜಿಲ್ಲೆ ಹರಿಹರದ ಪಂಚಮಸಾಲಿ ಪೀಠದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ನಮ್ಮವರು. ಮಠಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಆದ್ರೆ, ಮಠಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿ ಯಾಗಿವೆ ಎನ್ನುವುದು ಗೊತ್ತಿಲ್ಲ. ನಮ್ಮ ಜಿಲ್ಲೆಗೆ ನಮ್ಮ ಸಮುದಾಯದ ಅಧಿಕಾರಿಗಳನ್ನು ಯಡಿಯೂರಪ್ಪ ನೀಡಿದ್ದಾರೆ.
ಸಿದ್ದರಾಮಯ್ಯ ಸಿಎಂ ಇದ್ದಾಗ ಬರೀ ಕುರುಬರೇ ಇದ್ದರು ಎಂದರು.
ವೀರಶೈವ – ಲಿಂಗಾಯತ ಎನ್ನುವುದು ಶಮನ ಮಾಡೋದು ಹೇಗೆ ಎಂದು ಗೊತ್ತಾಗುತ್ತಿಲ್ಲ. ಯಡಿಯೂರಪ್ಪ ನನ್ನ ಬೆನ್ನುತಟ್ಟಿ ನಾನಿದ್ದೇನೆ ಎಂದಿದ್ದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾನೆ. ರೈಲು ಬಹಳ ಸ್ಪೀಡಾಗಿ ಹೋಗ ಬರದು. ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿಗಳು ಬಹಳ ವೇಗವಾಗಿ ಹೋಗುತ್ತಿದ್ದಾರೆ. ಅದಕ್ಕೆ ಬ್ರೇಕ್ ಹಾಕಿ, ಸಮಾಜ ಅಭಿವೃದ್ದಿಗೆ ಕ್ರಮ ಕೈಗೊಳ್ಳಿ ಎಂದು ವಚನಾನಂದ ಸ್ವಾಮಿ ಅವರಿಗೆ ಸಲಹೆ ನೀಡಿದರು.



