ಡಿವಿಜಿ ಸುದ್ದಿ, ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಲಿಂಗಾಯತರಾಗದರೂ ಕೊಡಲಿ, ದಲಿತರಿಗಾದರೂ ಕೊಡಲಿ. ಯಾವುದಕ್ಕೂ ನಮ್ಮ ತಕರಾರು ಇಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಯಾರಿಗಾದ್ರು ಕೊಡಲಿ. ಇವರಿಗೇ ಕೊಡಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಎಂ.ಬಿ.ಪಾಟೀಲ್ ಬಗ್ಗೆ ನಾನು ಎನು ಹೇಳಿಲ್ಲ. ಕೆಲವರು ನನ್ನ ಹೆಸರಿನಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದರು.
ಶ್ರೀ ವಚನಾನಂದ ಸ್ವಾಮೀಜಿ ಅವರ ಸಿಎಂ ಅವರೊಂದಿಗೆ ಸಭೆಯಲ್ಲಿ ನಡೆದುಕೊಂಡ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ನಾನು ಸಹ ಅದೇ ವೇದಿಕೆಯಲ್ಲಿ ಇದ್ದೆ. ಆದರೆ, ಶ್ರೀ ವಚನಾನಂದ ಸ್ವಾಮೀಜಿ ಬಗ್ಗೆ ನಾನು ಏನು ಮಾತಾಡಲ್ಲ, ಸಿಎಂ ಬಗ್ಗೆನೂ ಹೇಳಿಕೆ ನೀಡಲ್ಲ ಎಂದರು.



