ಡಿವಿಜಿ ಸುದ್ದಿ,ದಾವಣಗೆರೆ: ಕೆಎಸ್ ಆರ್ ಟಿಸಿ ಲಂಬಾಣಿ ನೌಕರರ ಬಳಗದಿಂದ ಮಾ. 11 ರಂದು ಬೆಳಗ್ಗೆ ನಗರದ ಕೆಎಸ್ಆರ್ ಟಿಸಿ ಘಟಕ-2 ರಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜರ 281 ನೇ ಜಯಂತ್ಯೋತ್ಸವ ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಗಳಗದ ಅಧ್ಯಕ್ಷ ಸೂರ್ಯನಾಯ್ಕ್, ಚಿತ್ರದುರ್ಗ ಗುರು ಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಹುಬ್ಬಳ್ಳಿಯ ಶ್ರೀ ತಿಪ್ಪೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವ ಕೆ. ಶಿವಮೂರ್ತಿ ನಾಯ್ಕ್, ಮಾಜಿ ಶಾಸಕ ಬಸವರಾಜ್ ನಾಯ್ಕ್, ಪ್ರಸನ್ನ ಕುಮಾರ್ ಬಾಲಾನಾಯ್ಕ್, ಜಗದೀಶ ನಾಯ್ಕ್, ವಿಜಯಕುಮಾರ್, ಹೀರಾನಾಯ್ಕ್, ನಾಗರಾಜ್ ಕ. ಮೇಯರ್ ಅಜಯಕುಮಾರ್ , ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್. ಹೆಬ್ಬಾಳ್ ಅಧ್ಯಕ್ಷತೆ ವಹಿಸಲಿದ್ದಾರೆ.