ಡಿವಿಜಿ ಸುದ್ದಿ, ದಾವಣಗೆರೆ: ಶಾಸಕ ಎಸ್.ಎ ರವೀಂದ್ರನಾಥ್ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಾರ್ಡ್ ಗಳಿಗೂ ಆಹಾರ ಕಿಟ್, ಸ್ಯಾನಿಟ್ರೈಸರ್, ಮಾಸ್ಕ್ ಗಳನ್ನು ಜನತೆಗೆ ವಿತರಿಸಿದರು.

ನಗರದ ಸೋಮೇಶ್ವರ ಸ್ಕೂಲ್ ಆವರಣದಲ್ಲಿ ಎಸ್ ಎ ರವೀಂದ್ರನಾಥ್ ಅವರು ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಎಂ. ಸುರೇಶ್, ಮಾಜಿ ಎಂಎಲ್ಸಿ ಶಿವಯೋಗಿ ಸ್ವಾಮಿ ಸೇರಿದಂತೆ ಮತ್ತಿತರರು ಸಾಥ್ ನೀಡಿದರು.

ಆಹಾರ ಕಿಟ್ ನಲ್ಲಿ ದಿನ ನಿತ್ಯ ಬಳಕೆಗೆ ಅಗತ್ಯವಾದ ಉಪ್ಪು, ಎಣ್ಣೆ ಉದ್ದಿನ ಬೇಳೆ , ಸಕ್ಕರೆ , ಕಾಳುಗಳು, ಸಂಬಾರಪುಡಿ, ಟೀ ಪುಡಿ ಸೇರಿದಂತೆ ಮತ್ತಿತರ ಪದಾರ್ಥಗಳಿದ್ದವು. ಇಂದು 2 ಸಾವಿರ ಆಹಾರ ಕಿಟ್, 3 ಸಾವಿರ ಮಾಸ್ಕ್, 3, 500 ಸ್ಯಾನಿಟೈಸರ್ ವಿತರಿಸಲಾಯಿತು



