ಡಿವಿಜಿ ಸುದ್ದಿ, ದಾವಣಗೆರೆ: ನನಗೆ ಬಸ್ ಡ್ರೈವಿಂಗ್ ಮೇಲೆ ಆತ್ಮ ವಿಶ್ವಾಸವಿದ್ದು, ಬಸ್ ಚಾಲನೆ ಬಗ್ಗೆ ಯಾವ ನೋಟಿಸ್ ಗೂ ಕೇರ್ ಮಾಡುವುದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಸಿದ್ದಾರೆ.
ಇತ್ತೀಚೆಗೆ ಹೊನ್ನಾಳಿ ತಾಲ್ಲೂಕಿಗೆ ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭದ ವೇಳೆ ಎಂ.ಪಿ. ರೇಣುಕಾಚಾರ್ಯ ಅವರು, ಕೆಎಸ್ಆರ್‌ಟಿಸಿ ಬಸ್ ಚಾಲನೆ ಮಾಡಿದ ಹಿನ್ನಲೆ ಹೊನ್ನಾಳಿ ಡಿಪೋ ಮ್ಯಾನೇಜರ್ ಗೆ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಡಿಸಿ ನೋಟಿಸ್ ನೀಡಿದ್ದರು.
ನಮ್ಮ ತಾಲ್ಲೂಕಿಗೆ ಇನ್ನು 15 ಹೊಸ ಮಾರ್ಗದಲ್ಲಿ ಬಸ್ ಸಂಚಾರ ಮಾಡಲಿವೆ. ಅಲ್ಲಿಯೂ ಬಸ್ ನ್ನು ನಾನೇ ಓಡಿಸುತ್ತೇನೆ. ಈ ಬಗ್ಗೆ ಯಾವ ಡಿಸಿ ( ಕೆಎಸ್ ಆರ್ ಟಿ ಸಿ ) ನೋಟಿಸ್ ಗೂ ಕೇರ್ ಮಾಡುವುದಿಲ್ಲ. ನನ್ನ ಬಳಿ ಭಾರಿ ವಾಹನ ಚಾಲನೆ ಪರವಾನಿಗೆ ಇಲ್ಲ. ಬೈಕ್ ಕಾರು ಲೈಸನ್ಸ್ ಮಾತ್ರ ಇದೆ. ಆದರೆ, ನಾನು ಗಾಡಿ ತೆಗೆದುಕೊಂಡು ಹೋದ್ರೆ ನನ್ನ ಪ್ರಾಣವೇ ಮೊದಲು ಹೋಗುತ್ತದೆ. ಹೀಗಾಗಿ ನನ್ನ ಡ್ರೈವ್ ಮೇಲೆ ನನಗೆ ಆತ್ಮ ವಿಶ್ವಾಸವಿದೆ ಎಂದಿದ್ದಾರೆ.



