ಡಿವಿಜಿ ಸುದ್ದಿ, ದಾವಣಗೆರೆ: ನಗರದ ಪೊಲೀಸ್ ರು ಹಾಫ್ ಹೆಲ್ಮೆಟ್ ಧರಿಸಿದವರೊಂದಿಗೆ ಅವಮಾನಿಯವಾಗಿ ವರ್ತಿಸಿದ್ದು, ಬೇಸರ ತರಿಸಿತು. ಈ ಬಗ್ಗೆ ಸಾರ್ವಜನಿಕ ವಾಗಿ ಮುಂಚಿತವಾಗಿ ತಿಳಿಸದೇ ಈ ರೀತಿಯಲ್ಲಿ ಎಕಾಏಕಿ ಕ್ರಮ ತೆಗೆದುಕೊಂಡಿದ್ದು ಎಷ್ಟು ಸರಿ..?
ಕೆಲವರು ಪೊಲೀಸ್ ಡ್ರೆಸ್ ನಲ್ಲಿ ಇರಲೇ ಇಲ್ಲಾ. ಕಾನೂನು ಅಧಿಕಾರಿಗಳಿಗೊಂದು, ಸಾರ್ವಜನಿಕರಿಗೆ ಒಂದು ಎಂದು ಇದೆಯೇ? ಬೈಕ್ ಸವಾರಿಗೆ ವೇಗ ನಿಯಂತ್ರಣ ಅಳವಡಿಸುವುದು ಒಳ್ಳೆಯದು. ಅದು ಬಿಟ್ಟು, ಈಗಾಗಲೇ ಕೊರೊನಾ ಹಾವಳಿಯಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಪೊಲೀಸ್ ರಿಂದ ಈ ರೀತಿ ಕಿರುಕುಳವನ್ನು ತಪ್ಪಿಸಲು ಜನರು ಒಗ್ಗಟ್ಟಾಗಬೇಕಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸಾಮಾನ್ಯ ಜನರಿಗೆ ಹೊರೆ ಆಗದಂತೆ ಈ ಬಗ್ಗೆ ಆದೇಶ ಹೊರಡಿಸಬೇಕೆಂದು ಮನವಿ ಮಾಡುತ್ತೇವೆ.
-ಸಿ. ಕೆ. ಆನಂದತೀರ್ಥಾಚಾರ್,ದಾವಣಗೆರೆ




