ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ 15.0 ಮಿ.ಮೀ ಸರಾಸರಿ ಮಳೆಯಾಗಿದ್ದು, ಸರಾಸರಿ 4.00 ಮಿ.ಮೀ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ, ವಾಸ್ತವಾಗಿ 15.00 ಮಿ.ಮೀ ಮಳೆಯಾಗಿದೆ.
ತಾಲ್ಲೂಕಿನಲ್ಲಿ ಮಳೆಯ ವಿವರ
- ಚನ್ನಗಿರಿ ತಾಲ್ಲೂಕಿನಲ್ಲಿ 6.0 ಮಿ.ಮೀ ವಾಡಿಕೆ- 16.0 ಮಿ.ಮೀ ವಾಸ್ತವ ಮಳೆ
- ದಾವಣಗೆರೆ ತಾಲ್ಲೂಕಿನಲ್ಲಿ 3.0 ಮಿ.ಮೀ ವಾಡಿಕೆ- 14.0 ಮಿ.ಮೀ ವಾಸ್ತವ ಮಳೆ
- ಹರಿಹರದಲ್ಲಿ ತಾಲ್ಲೂಕಿನಲ್ಲಿ 2.0 ವಾಡಿಕೆ- 19.0 ಮಿ.ಮೀ ವಾಸ್ತವ ಮಳೆ
- ಹೊನ್ನಾಳಿ ತಾಲ್ಲೂಕಿನಲ್ಲಿ 2.0 ಮಿ.ಮೀ ವಾಡಿಕೆ- 10.0 ಮಿ.ಮೀ ವಾಸ್ತವ ಮಳೆ
- ಜಗಳೂರು ತಾಲ್ಲೂಕಿನಲ್ಲಿ 2.0 ಮಿ.ಮೀ ವಾಡಿಕೆ- 13.0 ಮಿ.ಮೀ ವಾಸ್ತವ ಮಳೆ
- ನ್ಯಾಮತಿ 6.0 ಮಿ.ಮೀ ವಾಡಿಕೆಗ- 18.0 ಮಿ.ಮೀ ವಾಸ್ತವ ಮಳೆ
ಚನ್ನಗಿರಿ ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು, ರೂ. 50 ಸಾವಿರ ಮತ್ತು 1 ಮನೆ ಪೂರ್ಣ ಹಾನಿಯಾಗಿದ್ದು ರೂ.80 ಸಾವಿರ ಒಟ್ಟು 1.30 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗಿದೆ.



