ಡಿವಿಜಿ ಸುದ್ದಿ, ದಾವಣಗೆರೆ: ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ದಾವಣಗೆರೆಯ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಜಯದೇವ ವೃತ್ತದ ಬಳಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಪರ ಭಾಷಿಗರೇ ಆಡಳಿತ ನಡೆಸುತ್ತಿದ್ದ, ಕನ್ನಡಿಗರು ಅನಾಥವಾಗಿದ್ದಾರೆ ಎನ್ನುವ ಅಣುಕು ಪ್ರದರ್ಶಿಸಿದರು. ಇದಲ್ಲದೆ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ವಿಳಂಬ ಧೋರಣೆಗೆ ಅಳ್ವಿಕೆ ಮಾಡಿದ ಎಲ್ಲಾ ಸರ್ಕಾರ ಕಾರಣವಾಗಿದ್ದಾರೆ ಎಂದು ಮಾಜಿ ಹಾಲಿ ಸಿಎಂಗಳ ಫೋಟೋಗಳನ್ನು ಕೊರಳಿಗೆ ಹಾಕಿಕೊಂಡು ಘೋಷಣೆ ಕೂಗಿದರು.

ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಒರಿಸ್ಸಾದಲ್ಲಿ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ. 75 ರಷ್ಟು ಮೀಸಲಾತಿ ನೀಡಲಾಗಿದೆ. ರಾಜ್ಯದಲ್ಲಿಯೂ ಸಹ ಸರೋಜಿನಿ ಮಹಿಷಿ ವರದಿ ಆಧಾರಿಸಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗುವಂತೆ ಜಾರಿಗೊಳಿಸಬೇಕೆ ಎಂದು ಜಯದೇವ ವೃತ್ತದಿಂದ ಎಸಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಮಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದರು.
ಹಿಂದಿ, ತಮಿಳು, ತೆಲುಗು, ಮರಾಠಿ, ಕೇರಳ, ನೇಪಾಳಿ ಸೇರಿದಂತೆ ವಿವಿಧ ಭಾಷೆಗಳ ಬೋರ್ಡ್ ಗಳನ್ನು ಕೊರಳಿಗೆ ಹಾಕಿಕೊಂಡು, ರಾಜ್ಯದಲ್ಲಿ ಕನ್ನಡ ಭಾಷೆ ಅನಾಥವಾಗುತ್ತಿದೆ ಎನ್ನುವ ಅಣುಕು ಪ್ರದರ್ಶನ ನಡೆಸಿದರು.
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬುದು ಡಾ. ಸರೋಜಿ ಮಹಿಷಿ ಅವರು 1986 ರಲ್ಲಿ ವರದಿ ನೀಡಿದ್ದಾರೆ. ಎಲ್ಲಿಂದ ಇಲ್ಲಿವರೆಗೆ ಆಳ್ವಿಕೆ ಮಾಡಿದ ಎಲ್ಲಾ ಸರ್ಕಾರಗಳು ವರದಿ ಜಾರಿಗೆ ನಿರ್ಲಕ್ಷ್ಯ ತೋರಿವೆ. 3 ದಶಕದಿಂದ ವಿವಿಧ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದರೂ, ಸರ್ಕಾರ ವರದಿ ಜಾರಿ ಮಾಡಿಲ್ಲ. ಇದರಿಂದ ರಾಜ್ಯದಲ್ಲಿನ ಉದ್ಯೋಗಗಳು ಅನ್ಯ ರಾಜ್ಯದ ಪಾಲಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



