ಡಿವಿಜಿ ಸುದ್ದಿ, ದಾವಣಗೆರೆ: ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರ ಹೊರಡುವ ಶನೇಶ್ವರ, ಎನ್‌ಜೆವೈ, ಬಾತಿ ಹಾಗೂ ಸತ್ಯನಾರಾಯಣ ಫೀಡರ್‌ಗಳಲ್ಲಿ ತುರ್ತು ಕಾರ್ಯವಿರುವುದರಿಂದ ನ.26 ರಂದು ಬೆಳಿಗ್ಗೆ 10ಗಂಟೆಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವುಂಟಾಗಲಿದೆ.
ಶನೇಶ್ವರ ಫೀಡರ್ ವ್ಯಾಪ್ತಿಯ ಜಿ.ಎಂ.ಐ.ಟಿ. ಕಾಲೇಜು, ದೇವರಾಜ ಅರಸ್ ಬಡಾವಣೆ, ಪೂಜಾ ಹೋಟೆಲ್, ಸಾಯಿ ಹೋಟೆಲ್, ಕೋರ್ಟ್ ಸುತ್ತಮುತ್ತ, ಗಿರಿಯಪ್ಪ ಲೇಔಟ್, ಪಿ.ಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ಮತ್ತು ಗ್ರಾಮಾಂತರ ಪ್ರದೇಶಗಳಾದ ದೊಡ್ಡಬಾತಿ, ಹಳೇಬಾತಿ, ನೀಲಾನಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



