ಡಿವಿಜಿ ಸುದ್ದಿ, ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಬೆಳೆ ಸಮೀಕ್ಷೆಯಲ್ಲಿ ನಿರ್ಲಕ್ಷ್ಯ ತೋರಿದ ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತಕುಮಾರ್ ಎಂ.ಎಸ್ ಅವರನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಅಮಾನತ್ತಿನಲ್ಲಿಟ್ಟಿದ್ದಾರೆ.
2019-20 ನೇ ಸಾಲಿನ ಮುಂಗಾರು ಹಂಗಾಮಿನ ಸಮೀಕ್ಷೆ ಕಾರ್ಯದಲ್ಲಿ ಕೂಗೂನಹಳ್ಳಿ ಗ್ರಾಮದ ಸರ್ವೇ ನಂ.42/1 ರಲ್ಲಿ ಚಂದ್ರಶೇಖರಪ್ಪ ಹಾಗೂ ರತ್ನಮ್ಮ ಎಂಬುವರ ಬೆಳೆಯನ್ನು ತಪ್ಪಾಗಿ ನಮೂದಿಸಲಾಗಿದೆ ಎಂದು ರೈತರಿಂದ ಆಕ್ಷೇಪಣೆ ಸಲ್ಲಿಸಿದ್ದರು. ಸ್ಥಳ ಪರಿಶೀಲನೆ ನಡೆಸಿದಾಗ ಮೆಕ್ಕೆಜೋಳ ಬೆಳೆಯ ಕಟಾವು ಕಾರ್ಯ ಮುಗಿದಿರುವುದು ಮತ್ತು ಅಲ್ಲಿ ಅಡಿಕೆ ಬೆಳೆ ಇರುವ ಬಗ್ಗೆ ಯಾವ ಕುರುಹುಗಳು ಕಂಡು ಬಂದಿರುವುದಿಲ್ಲ.
ಈ ಬಗ್ಗೆ ಈ ಗ್ರಾಮ ಲೆಕ್ಕಿಗರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿ ರೈತರ ಮನವಿಯಂತೆ ಬೆಳೆ ಬದಲಾಯಿಸಲಾಗಿದೆ ಎಂದು ತಿಳಿಸಿದ್ದು, ವಾಸ್ತವದಂತೆ ಕ್ರಮ ವಹಿಸಿಲ್ಲ. ಈ ನೌಕರ ಕರ್ತವ್ಯದಲ್ಲಿ ನಿರ್ಲಕ್ಷತೆ ತೋರಿದ್ದು, ಬೆಳೆ ಸಮೀಕ್ಷೆಯಲ್ಲಿ ಅಸಡ್ಡೆತನ ತೋರಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಮಾನತ್ತಿನಲ್ಲಿ ಇಟ್ಟಿದ್ದಾರೆ .



