ಡಿವಿಜಿ ಸುದ್ದಿ, ದಾವಣಗೆರೆ: ಕೋಟೆ ನಾಡು ಚಿತ್ರದುರ್ಗಕ್ಕೆ ಕರೋನಾ ಎಂಟ್ರಿ ಕೊಟ್ಟಿದ್ದು, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರಿಗೆ ಕರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಸಂಸದರ ಭೀಮಸಮುದ್ರದ ಮನೆ ಸುತ್ತಲೂ 5 ಕಿ.ಮೀ. ರೆಡ್ ಝೋನ್ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದ್ದಾರೆ.
ಸಂಸದರು ಸೇರಿ 6 ಜನ ಗಯಾನದಿಂದ ಭಾರತಕ್ಕೆ ಬಂದಿದ್ದರು. ತಪಾಸಣೆಗೆ ಒಳಪಡಿಸಿದಾಗ ಸಂಸದರ ಪುತ್ರಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಭೀಮಸಮುದ್ರದ ಜಿಎಂ ಸಿದ್ದೇಶ್ವರ ಮನೆ ಸುತ್ತಲೂ ಈಗ 5 ಕಿ.ಮೀ. ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಮನೆಯಿಂದ ಯಾರು ಕೂಡ ಹೊರ ಬರುವಂತಿಲ್ಲ.
ಸಂಸದ ಜಿ.ಎಂ.ಸಿದ್ದೇಶ್ವರ ಸೇರಿ 6 ಜನರ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. 4 ಜನರ ವರದಿ ಬಂದಿದೆ, 4 ಜನರದ್ದು ನೆಗೆಟಿವ್ ಬಂದಿದೆ. ಇನ್ನೂ ಇಬ್ಬರ ವರದಿ ಬರೋದು ಬಾಕಿ ಇದೆ. ಸೋಂಕಿತರ ಜೊತೆ ಮಕ್ಕಳಿದ್ದರು. ಆದರೆ, ಮಕ್ಕಳಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ.



