ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್ ಗಳಿಗೆ ನಾಳೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಬೆಳಗ್ಗೆ 7 ರಿಂದ ಸಂಜೆ 5 ವರೆಗೂ ಮತದಾನ ನಡೆಯಲಿದೆ.
ಒಟ್ಟು 45 ವಾರ್ಡ್ ಗಳಲ್ಲಿ 377 ಮತ ಗಟ್ಟೆಗಳಿವೆ. 111 ಸೂಕ್ಷ್ಮ 28 ಅತಿ ಸೂಕ್ಷ್ಮ, 238 ಸಾಮಾನ್ಯ ಮತಗಟ್ಟೆಗಳಿವೆ. ಒಟ್ಟು 3, 80, 917 ಮತದಾರರಿದ್ದು, 1,90, 506 ಪುರುಷ, 1,90,347 ಮಹಿಳಾ ಮತದಾರರಿದ್ದಾರೆ.
ದಾವಣಗೆರೆ ಡಿ ಅರ್ ಆರ್ ಹೈಸ್ಕೂಲ್ ಆವರಣದ ಮಸ್ಟರಿಂಗ್ ಕೇಂದ್ರದಿಂದ ಚುನಾವಣಾ ಸಿಬ್ಬಂದಿ ನಿಯೋಜಿತ ಮತಗಟ್ಟೆಗಳಿಗೆ ತೆರಳಿದ್ದಾರೆ. ಚುನಾವಣೆ ಮುಗಿದ ನಂತರ ನ. 14 ರಂದು ಡಿಆರ್ ಹೈಸ್ಕೂಲ್ ಮೈದಾನದಲ್ಲಿ ಮತ ಎಣಿಕೆ ನಡೆಯಲಿದೆ.
ಇಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗು ಎಸ್ಪಿ ಹನುಮಂತರಾಯ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮತದಾನ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.