ಡಿವಿಜಿ ಸುದ್ದಿ, ದಾವಣಗೆರೆ: ನಗರದ ಗಾಂಧಿ ನಗರದ ಶ್ರೀಗುರು ರಾಮದಾಸ ಆಧ್ಯಾತ್ಮ ಮಂದಿರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
30ನೇ ವರ್ಷದ ಸಾಮೂಹಿಕ ಕಾರ್ಯಕ್ರಮನ್ನು ಪಾಂಡುಮಟ್ಟಿ ಮಠದ ಶ್ರೀ ಗುರುಬಸವ ಸ್ವಾಮೀಜಿ, ಮದಾರ ಚನ್ನಯ್ಯ ಗುರು ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ವಿರಕ್ತ ಮಠದ ಶ್ರೀ ಗುರು ಬಸವಪ್ರಭು ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಮೂಹಿಕ ವಿವಾಹ ಜರುಗಿತು. 7 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ನವ ಜೀವನಕ್ಕೆ ಕಾಲಿಟ್ಟರು.
ನವ ಜೋಡಿಗಳಿಗೆ ಆಶೀರ್ವಾದದ ನಂತರ ಮಾತನಾಡಿದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ನಮ್ಮ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದು, ಸಾಮೂಹಿಕ ವಿವಾಹವಾಗುವ ಮೂಲಕ ನೆಮ್ಮದಿಯಿಂದ ಜೀವನ ನಡೆಸಿ. ಮಧ್ಯಮ ವರ್ಗದಲ್ಲಿ ಒಂದು ವಿವಾಹ ಮಾಡಬೇಕಾದರೆ ಕನಿಷ್ಠ 5 ಲಕ್ಷ ಖರ್ಚು ಬರುತ್ತದೆ. ಇಡೀ ದೇಶದಲ್ಲಿ ಆರ್ಥಿಕ ಸಂಕಷ್ಟವಿದೆ. ಇಂತಹ ಪರಿಸ್ಥಿತಿಯಲ್ಲಿ ಮದುವೆಗೆ ಖರ್ಚು ಮಾಡುವ ಹಣವನ್ನು ಬೇರೆ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುವ ಮೂಲಕ ಸರಳವಾಗಿ ಸಾಮೂಹಿಕ ವಿವಾಹವಾಗಿ ಎಂದು ಕರೆ ನೀಡಿದರು.
ಪಾಂಡುಮಟ್ಟಿ ಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ,ಕಳೆದ 30 ವರ್ಷದಿಂದ ಶ್ರೀಗುರು ರಾಮದಾಸ ಆಧ್ಯಾತ್ಮ ಟ್ರಸ್ಟ್ ಸಾಮೂಹಿಕ ವಿಚಾರ ನೆರವೇರಿಸಿಕೊಂಡು ಬರುತ್ತಿದೆ. ಇಂತಹ ಕಾರ್ಯ ಮಾಡುತ್ತಿರುವ ಟ್ರಸ್ಟ್ ಗೆ ಧನ್ಯವಾದಗಳು.ಈ ಮೂಲಕ ಸಮಾಜಕ್ಕೆ ಮಾದರಿಯಾಗಿದೆ. ಸಾಮೂಹಿಕ ವಿವಾಹಗಳಲ್ಲಿ ಸಿಗುವ ಶ್ರೀಗಳ ಆಶೀರ್ವಾದ ಅದ್ದೂರಿ ಮದುವೆಯಲ್ಲಿ ಸಿಗುವುದಿಲ್ಲ ಎಂದರು.
ವಿರಕ್ತ ಮಠದ ಶ್ರೀ ಗುರು ಬಸವಪ್ರಭು ಸ್ವಾಮೀಜಿ ಮಾತನಾಡಿ, ಶ್ರೀ ಗುರು ರಾಮದಾಸ ಸ್ವಾಮಿ ಆಧ್ಯಾತ್ಮ ಮಂದಿರದ ಕಾರ್ಯಕ್ರಮ ನಮ್ಮ ಮಠದ ಕಾರ್ಯಕ್ರಮದಂತಾಗಿದ್ದು, ಆಹ್ವಾನ ಪತ್ರಿಕೆ ಕೊಡದಿದ್ದರೂ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ. ಮರುಘಾ ಶ್ರೀಗಳು ಸಹ ಆಶೀರ್ವಾದವು ಸಹ ನಿಮ್ಮ ಮೇಲಿದ್ದು, ನವ ಜೋಡಿಗಳು ಉತ್ತಮ ರೀತಿಯಲ್ಲಿ ಜೀನವ ನಡೆಸುವ ಮೂಲಕ ಸಮಾಜ, ಮನೆತನಕ್ಕೆ ಗೌರವ ತರುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ ಅಧ್ಯಕ್ಷ ಎಚ್ ವೀರಭದ್ರಪ್ಪ ಬಿ. ಎ.ಸ್ ಪುರುಷೋತ್ತಮ್ , ಖಜಾಂಚಿ ಬಿ.ಎಂ. ರಾಮಸ್ವಾಮಿ, ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷರು ಎಲ್.ಎಂ ಹನುಮಂತಪ್ಪ, ನಾಯಕ ಸಮಾಜದ ಹಿರಿಯರು ಮುಖಂಡರು ಬಿ. ವೀರಣ್ಣ, ಮಹಾನಗರ ಪಾಲಿಕೆ ಸದಸ್ಯರು ಜೆ.ಡಿ ಪ್ರಕಾಶ್, ಕಾಂಗ್ರೆಸ್ ಯುವ ಮುಖಂಡ ಸಾಗರ್ ಎಲ್ .ಎಚ್ ಸೇರಿದಂತೆ ಗಾಂಧಿ ನಗರದ ಹಿರಿಯ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.