ಡಿವಿಜಿ ಸುದ್ದಿ, ದಾವಣಗೆರೆ: ಮಹಾ ನಗರ ಪಾಲಿಕೆಯ ಚುನಾವಣ ಕಣ ಅಂತಿಮ ಘಟಕ್ಕೆ ತಲುಪಿದ್ದು, ಮೂರು ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ತೀವ್ರ ಕಸರತ್ತು ನಡೆಸಿದರು.
ಇಂದು ಕೊನೆಯ ದಿನವಾಗಿದ್ದರಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಎಲ್ಲಾ ಅಭ್ಯರ್ಥಿಗಳು ಮತದಾರನ್ನು ಮನವೊಲಿಸುವ ಪ್ರಯತ್ನದಲ್ಲಿ ನಿರತರಾಗಿದ್ದರು. ಬಿರು ಬಿಸಿಲಿನಲ್ಲೂ ವಾರ್ಡ್ ಬೀದಿ ಬೀದಿಗಳಲ್ಲಿ ಮತಯಾಚಿಸಿದರು.
31 ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಪಾಮೇನಹಳ್ಳಿ ಅವರು ತಮ್ಮ ವಾರ್ಡ್ ನಲ್ಲಿ ಪಕ್ಷದ ಕಾರ್ಯರ್ತರೊಂದಿಗೆ ಭರ್ಜರಿ ಪ್ರಚಾರ ನಡೆಸಿದರು. ಮತದಾರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.
41 ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಬಸವರಾಜ್ (ಡಿಎಸ್ ಎಸ್ ಬಸವರಾಜ್ ಪತ್ನಿ) ಅಪಾರ ಬೆಂಬಲಿಗರೊಂದಿಗೆ ವಾರ್ಡ್ ನಾದ್ಯಂತ ಮತಯಾಚನೆ ಮಾಡಿದರು. ಕೊನೆಯ ದಿನವಾಗಿದ್ದರಿಂದ ಅಂತಿಮವಾಗಿ ಮತದಾರನ್ನು ಮನವೊಲಿಸಿದರು.
16 ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಕೂಡ ಕೊನೆ ದಿನ ಅಂತಿಮ ಕಸರತ್ತು ನಡೆಸಿ, ಮತಯಾಚನೆ ನಡೆಸಿದರು.
ಇನ್ನು 43 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಯುವರಾಜ ಕುಂಬಪ್ಪರ ವಾರ್ಡ್ ನ ಜನತೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು. ಇನ್ನು ಇದೇ ವಾರ್ಡ್ ನ ಕಲ್ಲಹಳ್ಳಿ ನಾಗರಾಜ್ ಕಾಂಗ್ರೆಸ್ ಪರ ಮತ ಹಾಕುವಂತೆ ಮನವಿ ಮಾಡಿದರು.
4ನೇ ವಾರ್ಡ್ ನ ಜೆಡಿಎಸ್ ಅಭ್ಯರ್ಥಿ ಅಮಾನುಲ್ಲಾ ಖಾನ್, 9ನೇ ವಾರ್ಡ್ ಮನ್ಸೂರ್ , 2ನೇ ವಾರ್ಡ್ ನ ನೂರ್ ಜಹಾನ್, 12 ನೇ ವಾರ್ಡ್ ಜಬೀನಾ ತಾಜ್ ಮತಯಾಚನೆ ಮಾಡಿದ್ರು.