ಡಿವಿಜಿ ಸುದ್ದಿ, ದಾವಣಗೆರೆ: ಮಹಾನಗರ ಪಾಲಿಕೆಯ ಕೆ.ಬಿ ಬಡಾವಣೆ ಮತ್ತು ಡಿಸಿಎಂ ಕ್ವಾಟರ್ಸ್ ಮೂಲ ಸೌಕರ್ಯ ಒದಗಿಸಿ ಮಾದರಿ ವಾರ್ಡ್ ನಿರ್ಮಿಸಿಸುವ ಗುರಿ ಹೊಂದಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಟಿ ವೀರೇಶ್ ಹೇಳಿದರು.
ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಕಳೆದ 30 ವರ್ಷದಿಂದ ಸಾರ್ವಜನಿಕ ಜೀನದಲ್ಲಿದ್ದು, ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಹೋರಾಟದ ಅನುಭವ ಗುರುತಿಸಿ ಬಿಜೆಪಿ ಪಕ್ಷದಿಂದ ಟಿಕೇಟ್ ನೀಡಿದೆ. ವಾರ್ಡ್ ನಂಬರ್ 25 ಅನ್ನು ಮಾದರಿ ವಾರ್ಡ್ ಆಗಿ ನಿರ್ಮಿಸುವ ಗುರಿ ಹೊಂದಿದ್ದೇನೆ ಎಂದರು.
ಸ್ಮಾರ್ಟ್ ಸಿಟಿಯಾಗಿರುವ ದಾವಣಗೆರೆಯಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ನೀಡುವ ಮೂಲಕ ಕೇಂದ್ರ, ರಾಜ್ಯ ಬಿಜೆಪಿಗೆ ಬೆಂಬಲಿಸಿದಂತೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿಗೆ ಬೆಂಬಲ ನೀಡಿ ಎಂದು ತಿಳಿಸಿದರು



