ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿಯ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 35ಕ್ಕೂ ಹೆಚ್ಚು ಗೆಲ್ಲುವ ವಿಶ್ವಾಸವಿದ್ದು, ನೂರಕ್ಕೆ ನೂರುರಷ್ಟು ಅಧಿಕಾರ ಹಿಡಿಯುವ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತ್ ರಾವ್ ಜಾಧವ್ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ 6 ಬಿಜೆಪಿ ಶಾಸಕರಿಗೆ ಪ್ರತಿಯೊಬ್ಬರಿಗೂ ಮೂರು ವಾರ್ಡ್ಗಳ ಉಸ್ತುವಾರಿ ನೀಡಲಾಗಿದ್ದು, ಆಯಾ ವಾರ್ಡ್ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಶಾಸಕರಿಗೆ ನೀಡಲಾಗಿದೆ. ಶಾಸಕರ ಜೊತೆ ಬೂತ್ ಮಟ್ಟ ಅಧ್ಯಕ್ಷರು, ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ ಎಂದರು.
ಈ ಬಾರಿ ಚುನಾವಣೆಯಲ್ಲಿ ಎಲ್ಲಿಯೂ ಕೂಡ ಅಪಸ್ವರ ಬರದಂತೆ ನೋಡಿಕೊಂಡಿದ್ದೇವೆ. ಒಂದೆರಡು ಕಡೆ ಅನ್ಯಾಯವಾಗಿದೆ. ಅವರನ್ನು ಕರೆಸಿ ಮಾತನಾಡುತ್ತೇವೆ. ಟಿಕೆಟ್ ವಂಚಿತರಿಗೆ ಬೇರೆ ಜವಾಬ್ದಾರಿ ನೀಡುತ್ತೇವೆ. ಎಲ್ಲರು ಪಕ್ಷದ ತೀರ್ಮಾನಕ್ಕೆ ಬದ್ಧವಾಗಬೇಕು ಎಂದರು.



