ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನೇರ ಪಾವತಿ ವೇತನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸುವಂತೆ ಹಾಗೂ ಈ ಹಿಂದೆ ಮಹಾನಗರ ಪಾಲಿಕೆಯಲ್ಲಿ ಆರು ತಿಂಗಳು ಕೆಲಸವನ್ನು ಮಾಡಿ ಬಿಟ್ಟಿರುವ 89 ಕಾರ್ಮಿಕರನ್ನು ಪುನಃ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಮ್.ಹನುಮಂತಪ್ಪ ಮಹಾನಗರ ಪಾಲಿಕೆ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ನೇರ ಪಾವತಿ ಪೌರ ಕಾರ್ಮಿಕರ, ಸಂಘದ ಉಪಾಧ್ಯಕ್ಷ ಎಲ್.ಎಚ್ ಸಾಗರ್ , ಸಂಘದ ನಿರ್ದೇಶಕ ರವಿವರ್ಧನ್, ಚೇತನ, ಮುತ್ತೂರಮ್ಮ ರೇಣುಕಮ್ಮ ಆವರಗೆರೆ ಮಂಜುನಾಥ, ಪರಶುರಾಮ, ಮಹಾಂತೇಶ್, ರಾಮಚಂದ್ರಪ್ಪ ಉಪಸ್ಥಿತರಿದ್ದರು.



