ಡಿವಿಜಿ ಸುದ್ದಿ, ದಾವಣಗೆರೆ : ಈ ಬಾರಿಯ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತುಸು ಹೆಚ್ಚಾಗಿದೆ. ಒಟ್ಟು 15 ಕಡೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಅದರಲ್ಲಿ 24 ನೇ ವಾರ್ಡ್ ಕೂಡ ಒಂದು.
24 ನೇ ವಾರ್ಡ್ ನ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಯುವ ಮುಖಂಡ ಅತೀಥ್ ರಾವ್ ಅಂಬರ್ ಕರ್ ಸ್ಪರ್ಧೆಗೆ ಇಳಿದಿದ್ದಾರೆ. ಇನ್ನು ಬಿಜೆಪಿಯಿಂದ ಪ್ರಸನ್ನ ಕುಮಾರ್ ಮತ್ತು ಕಾಂಗ್ರೆಸ್ ನಿಂದ ನಲ್ಲೂರು ರಾಘವೇಂದ್ರ ಸ್ಪರ್ಧೆಗೆ ಇಳಿದ್ದಾರೆ.

ಯುವ ಮುಖಂಡ ಬಿಜೆಪಿ ಬಂಡಾಯ ಅಭ್ಯರ್ಥಿ ಅಥೀತ್ ರಾವ್ ಅಂಬರ್ ಕರ್ ಬೆಳಗ್ಗೆಯಿಂದಲೇ ಮನೆ ಮನೆ ತೆರಳಿ ಪ್ರಚಾರ ಮಾಡಿದರು. ಎಂಸಿಸಿ ಎ ಬ್ಲ್ಯಾಕ್ ಮತ್ತು ಪಿಜೆ ಬಡಾವಣೆಯಲ್ಲಿ ಪ್ರದೇಶದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರು. ಉಳುಮೆ ಮಾಡುತ್ತಿರುವ ರೈತನ ಗುರುತಿಗೆ ಮತ ಹಾಕುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಭರ್ಜರಿ ಪ್ರಚಾರದ ಮಧ್ಯೆ ಡಿವಿಜಿ ಸುದ್ದಿಯೊಂದಿಗೆ ಮಾತನಾಡಿವರು, ನಾನು ಸ್ಥಳೀಯನಾಗಿದ್ದು, ನಾಲ್ಕೈದು ವರ್ಷದಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ಈ ಬಾರಿ ನನಗೆ ಟಿಕೆಟ್ ನೀಡದೆ, ಅನ್ಯಾಯ ಮಾಡಲಾಗಿದೆ. ಹೀಗಾಗಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ. ನಾನು ದಿನದ 24 ತಾಸು ಜನರ ಸೇವೆ ಮಾಡಲು ಸಿದ್ಧನಿದ್ದೇನೆ. ನಿಮ್ಮ ಮನೆ ಮಗನೆಂದು ತಿಳಿಸಿದು ಯುವ ಮುಖಂಡನನ್ನು ಬೆಂಬಲಿಸಿ ಎಂದು ಕೇಳಿಕೊಂಡರು.
ನಾನು ಯಾವುದೇ ಹಣ ಮಾಡುವ ಉದ್ದೇಶದಿಂದ ಚುನಾವಣೆಗೆ ನಿಂತಿಲ್ಲ. ಜನ ಸೇವೆಯೇ ನನ್ನ ಮುಖ್ಯ ಉದ್ದೇಶವಾಗಿದ್ದು, ಈ ಬಾರಿ ನೂರಕ್ಕೆ ನೂರಷ್ಟು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.



