ಡಿವಿಜಿ ಸುದ್ದಿ, ದಾವಣಗೆರೆ: ಭಾರೀ ಜಿದ್ದಾ ಜಿದ್ದಿನ ಕಣವಾಗಿದ್ದ 17 ಮತ್ತು 25 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಗಳಾದ ಅಜಯ್ ಕುಮಾರ್ ಹಾಗೂ ಎಸ್.ಟಿ ವೀರೇಶ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸತತ ಮೂರು ಸಲ ಗೆಲುವು ಸಾಧಿಸಿದ್ದ ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ವಿರುದ್ಧ 2,395 ಮತ ಪಡೆಯುವ ಮೂಲಕ ಅಜಯ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಇನ್ನು 25 ನೇ ವಾರ್ಡ್ ನಲ್ಲಿ ಸತತವಾಗಿ ಗೆಲುವು ಸಾಧಿಸಿದ್ದ ಕೆ.ಜಿ. ಶಿವಕುಮಾರ್ ವಿರುದ್ಧ ಭಾರೀ ಗೆಲುವು ಸಾಧಿಸಿದ್ದಾರೆ.