Connect with us

Dvg Suddi-Kannada News

ದಾವಣಗೆರೆ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ: ನ.12 ಮತದಾನ 14 ರಂದು ಮತ ಎಣಿಕೆ

ದಾವಣಗೆರೆ

ದಾವಣಗೆರೆ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ: ನ.12 ಮತದಾನ 14 ರಂದು ಮತ ಎಣಿಕೆ

ಡಿವಿಜಿ ಸುದ್ದಿ, ದಾವಣಗೆರೆ: ರಾಜ್ಯ ಚುನಾವಣಾ ಆಯೋಗ ದಾವಣಗೆರೆ ಮಹಾನಗರ ಪಾಲಿಕೆಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದು, ನವೆಂಬರ್ 12 ರಂದು ಚುನಾವಣೆ ನಡೆಸಲು ಆದೇಶ ಹೊರಡಿಸಿದೆ.  ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್ ಗಳಿಗೆ  ಚುನಾವಣೆ ನಡೆಯಲಿದ್ದು, ನ. 14 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

ರಾಜ್ಯ ಚುನಾವಣಾ ಆಯೋಗ ದಾವಣಗೆರೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ನ.12 ರಂದು ನಡೆಸಲಿದ್ದು, ನ. 12 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದೆ.

ಆದೇಶದ ಅನ್ವಯ ಅ. 24 ರಿಂದ ಜಿಲ್ಲಾ ಚುನಾವಣಾ ಆಧಿಕಾರಿ ಅಧಿಸೂಚನೆ ಹೊರಡಿಸಲಿದ್ದು, ಅ. 30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ. ನ.2 ರಂದು ನಾಮಪತ್ರ  ಪರಿಶೀಲನೆ ನಡೆಯಲಿದೆ. ನ. 4 ರಂದು ನಾಮ ಪತ್ರ ಹಿಂತಗೆದುಕೊಳ್ಳಲು ಕೊನೆಯ ದಿನ. ನ. 12 ರಂದು ಮತದಾನ ನಡೆಯಲಿದ್ದು,  ನ.13 ರಂದು ಅವಶ್ಯವಿದ್ದರೆ ಮರು ಮತದಾನ ನಡೆಯಲಿದೆ. ನ. 14 ರಂದು ಚುನಾವಣಾ ಫಲಿತಾಂಶ ಹೊರ ಬೀಳಿಲಿದೆ.

ಪ್ರಮುಖ ದಿನಾಂಕಗಳು

  • ಅ. 24 ರಿಂದ ಜಿಲ್ಲಾ ಚುನಾವಣಾ ಆಧಿಕಾರಿ ಅಧಿಸೂಚನೆ
  • ಅ. 30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ
  • ನ. 2 ರಂದು ನಾಮಪತ್ರ  ಪರಿಶೀಲನೆ
  • ನ. 4 ರಂದು ನಾಮ ಪತ್ರ ಹಿಂತಗೆದುಕೊಳ್ಳಲು ಕೊನೆಯ ದಿನ
  • ನ. 12 ರಂದು ಮತದಾನ
  • ನ. 13 ರಂದು ಅವಶ್ಯವಿದ್ದರೆ ಮರು ಮತದಾನ
  • ನ. 14 ರಂದು ಚುನಾವಣಾ ಫಲಿತಾಂಶ

ಮಹಾನಗರ ಪಾಲಿಕೆಯಲ್ಲಿ ವಿಧಾನಸಭಾ ಚುನಾವಣೆಗೆ  ಸಂಬಂಧಿಸಿದ ಮತದಾನ ಪಟ್ಟಿಯಂತೆಯೇ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ವ್ಯಕ್ತಿಯೂ ಚುನಾವಣಾ ನಾಮಪತ್ರದ ಜೊತೆಗೆ ತನ್ನ ಹಿನ್ನೆಲೆ, ಚರಾಸ್ತಿ ಮತ್ತು ಚಿರಾಸ್ತಿಗಳ ವಿವರ ವಿದ್ಯಾರ್ಹತೆ, ಆದಾಯ ಮೂಲಗಳ ವಿವರ ಸಲ್ಲಿಸಬೇಕು. ಮತದಾನ ತಿರಸ್ಕರಿಸುವ  ನೋಟಾ ವ್ಯವಸ್ಥೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.

 

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top