Connect with us

Dvg Suddi-Kannada News

ಜ.10 ರಿಂದ 12 ವರೆಗೆ ಶ್ರೀ ಜಯದೇವ ಮುರುಘರಾಜೇಂದ್ರ  ಶ್ರೀಗಳ 63 ನೇ ಸ್ಮರಣೋತ್ಸವ

ದಾವಣಗೆರೆ

ಜ.10 ರಿಂದ 12 ವರೆಗೆ ಶ್ರೀ ಜಯದೇವ ಮುರುಘರಾಜೇಂದ್ರ  ಶ್ರೀಗಳ 63 ನೇ ಸ್ಮರಣೋತ್ಸವ

ಡಿವಿಜಿ ಸುದ್ದಿ, ದಾವಣಗೆರೆ: ಮುರುಘರಾಜೇಂದ್ರ ಬೃಹನ್ಮಠದ ತ್ರಿವಿಧ ದಾಸೋಹಿ ಡಾ. ಶ್ರೀ  ಶಿವಮೂರ್ತಿ ಮುರುರುಘಾ ಶರಣರ ಸಾನಿಧ್ಯದಲ್ಲಿ ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮಿಜಿಗಳ 63 ನೇ ಸ್ಮರಣೋತ್ಸವ-2020, ಸಹಜ ಶಿವಯೋಗ ಶರಣ ಸಂಸ್ಕೃತಿ ಉತ್ಸವ  ಜ. 10 ರಿಂದ 12 ವರಗೆ ನಗರದ ಜಯದೇವ ವೃತ್ತದ ಬಸವಕೇಂದ್ರದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮುರುಘರಾಜೇಂದ್ರ ಬೃಹನ್ಮಠದ ಡಾ. ಶ್ರೀ  ಶಿವಮೂರ್ತಿ ಮುರುರುಘಾ ಶರಣರು ಮಾತನಾಡಿ, ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮಿಜಿಗಳ 63 ನೇ ಸ್ಮರಣೋತ್ಸವ 2020, ಜಯದೇವಶ್ರೀ ಹಾಗೂ ಶೂನ್ಯಪೀಠ ಪ್ರಶಸ್ತಿ ಪ್ರದಾನ ಸಮಾರಂಭದ ಸಹಜ ಶಿವಯೋಗ ಶರಣ ಸಂಸ್ಕೃತಿ ಉತ್ಸವವು  ಜ. 10 ರಿಂದ 12 ವರಗೆ ದಾವಣಗೆರೆಯಲ್ಲಿ ನಡೆಯಲಿದೆ. ವಿವಿಧ ಕಾರ್ಯಕ್ರಮಗಳೊಂದಿಗೆ 10 ದಿನಗಳ ಕಾಲ ನಡೆಯುವ ಈ ಉತ್ಸವದ ಮುಖ್ಯ ಕಾರ್ಯಕ್ರಮ ಜ.10 ರಿಂದ 12 ವರೆಗೆ ನಡೆಲಿದೆ ಎಂದು ತಿಳಿಸಿದರು.

ಜ. 10 ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರವಾದಿ ಸಾಲುಮರದವೀರಾಚಾರಿ ಅವರು ಬೆಳಗ್ಗೆ 7.30ಕ್ಕೆ ಬಸವತತ್ವ ಧ್ವಜರೋಹಣ ನೆರವೇರಿಸಲಿದ್ದಾರೆ. 7.45 ಕ್ಕೆ ಡಾ. ಶ್ರೀ  ಶಿವಮೂರ್ತಿ ಮುರುರುಘಾ ಶರಣರ ಸಾನಿಧ್ಯದಲ್ಲಿ ಸಹಜ ಶಿವಯೋಗಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11.ಕ್ಕೆ ಶ್ರೀಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಸಂಜೆ  6.30 ಕ್ಕೆ ಮುಖ್ಯ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಜಯದೇವಶ್ರೀ ಮತ್ತು ಶೂನ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಾ. ಶ್ರೀ  ಶಿವಮೂರ್ತಿ ಮುರುರುಘಾ ಶರಣರ ಅಧ್ಯಕ್ಷತೆ ವಹಿಸಲಿದ್ದು, ಧಾರವಾಡದ ಮುರುಘಾಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ.

ವಿಧಾನ ಪರಿಷತ್ ಸದಸ್ಯ ಎಚ್.ಎಂ ರೇವಣ್ಣ ಅವರಿಗೆ ಜಯದೇವ ಪ್ರಶಸ್ತಿ, ಉದ್ಯಮಿ ಎಚ್.ಸಿ. ಪ್ರಭಾಕರ್ ಅವರಿಗೆ ಶೂನ್ಯ ಪೀಠ ಪ್ರಶಸ್ತಿ, ಖ್ಯಾತ ವೈದ್ಯ ಡಾ. ನಾಗರಾಜ್ ಬಿ. ಸಜ್ಜನ್ ಅವರಿಗೆ ಶೂನ್ಯಪೀಠ ಚನ್ನಬಸವ ಪ್ರಶಸ್ತಿ ಹಾಗೂ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಅವರಿಗೆ ಶೂನ್ಯ ಅಕ್ಕನಾಗಮ್ಮ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ವಿನಯಕ ಸೊರಕೆ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗ, ಎಸ್ .ಪಿ. ಹನುಮಂತರಾಯ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಕೋಗಿಲೆ  ಪ್ರತಿಭೆ ಅರ್ಜುನ್ ಇಟಗಿ, ಮಹನ್ಯ ಗುರುಪಾಟೀಲ್ ಹಾಡಲಿದ್ದಾರೆ.

ಜ.11 ರಂದು ಬೆಳಗ್ಗೆ 7.30ಕ್ಕೆ ಸಹಜ ಶಿವಯೋಗಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಅತಿಥಿಗಳಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಭಾಗಿಯಾಗಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ ಕಾರ್ಯಕ್ರಮ ಜರುಗಲಿದೆ.. ಬೆಳಗ್ಗೆ 10.30 ಕ್ಕೆ ಯೋಗಾಸನ ಕ್ರೀಡೆಗೆ ಚಾಲನೆ ಸಿಗಲಿದ್ದು,  ಬೆಳಗ್ಗೆ 11 ಗಂಟೆಗೆ ದೇವದಾಸಿ ಮಹಿಳಾ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

ಸಂಜೆ 6.30 ಮಹಿಳಾ ಸಮಾವೇಶ ನಡೆಯಲಿದ್ದು, ಡಾ. ಶ್ರೀ  ಶಿವಮೂರ್ತಿ ಮುರುರುಘಾ ಶರಣರ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಶ್ರೀ ದೇವಮಂದಿರ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ್ಯ ಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ. ಮಹಿಳೆ,ಮಕ್ಕಳ ಸುರಕ್ಷತೆ ಮತ್ತುಎನ್ ಕೌಂಟರ್ ಕುರಿತು ಚರ್ಚೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಚಿವ ಲಕ್ಷ್ಮಣ್ ಸವದಿ, ಸಂಸದ ಜಿ.ಎಂ. ಸಿದ್ದೇಶ್ವರ, ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಎಸ್.ಎ ರವೀಂದ್ರನಾಥ್, ಭಾಗಿಯಾಗಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಪಪಾಂಡು ಖ್ಯಾತಿಯ ಚಿದಾನಂದ, ಕನ್ನಡ ಕೋಗಿಲೆ ಖ್ಯಾತಿಯ ಖಾಸೀಮ್, ನೀತು ಸುಬ್ರಹ್ಮಣ್ಯ ಭಾಗವಹಿಸಲಿದ್ದಾರೆ.

ಜಿ.12 ರಂದು ಬೆಳಗ್ಗೆ 9.45 ಕ್ಕೆ ಬಸವಕೇಂದ್ರ ಆಶ್ರಯದಲ್ಲಿ ಜೆಜೆಎಂ ಮೆಡಿಕಲ್ ಕಾಲೇಜಿನನಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10.30ಕ್ಕೆ ರೋಟರಿ ಬಲಾ ಭವನ  ಶಿವಯೋಗಾಶ್ರಮ ಮತ್ತು ದಾವಣಗೆರೆ ಜಿಲ್ಲಾ ಚೆಸ್ ಕ್ಲಬ್ ವತಿಯಿಂದ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ನಡೆಯಲಿದೆ.

ಸಂಜೆ. 6.30 ಕ್ಕೆ ಅನುಭವ ಮಂಟಪ ಪರಿಕಲ್ಪನೆ ಮತ್ತು ಪೌರತ್ವ ಕಾಯ್ದೆ-ಒಂದು ಮಾಹಿತಿ ಸಭೆ ನಡೆಯಲಿದ್ದು, ಡಾ. ಶ್ರೀ  ಶಿವಮೂರ್ತಿ ಮುರುರುಘಾ ಶರಣರ ಅಧ್ಯಕ್ಷತೆ ವಹಿಸಿಕೊಳಲ್ಲಿದ್ದಾರೆ. ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಾನಿಧ್ಯವಹಿಸಿಕೊಳ್ಳಲಿದ್ಧಾರೆ. ಮುಖ್ಯ ಅತಿಥಿಗಳಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಆಯನೂರು ಮಂಜುನಾಥ್, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಖ್ಯಾತ ವಕೀಲ ಪ್ರೊ. ರವಿವರ್ಮಕುಮಾರ್, ಸಾಹಿತಿ ರಂಜಾನ್ ದರ್ಗಾ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ್ ಭಾಗಿಯಾಗಲಿದ್ಧಾರೆ. ಸಂಸ್ಕೃತಿಕ ನಗೆ ಭಾಷಣಕಾರ ವೈಜನಾಥ್ ಸಜ್ಜನಶೆಟ್ಟಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top