ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗದ ಹಿನ್ನೆಲೆ ದಾವಣಗೆರೆ ಜಿಲ್ಲೆಯನ್ನು ಆರೆಂಜ್ ಝೋನ್ ನಿಂದ ಗ್ರೀನ್ ಝೋನ್ ತರುವಂತೆ ಶಿಫಾರಸ್ಸು ಮಾಡಲಾಗುವುದು. ಒಂದು ವೇಳೆ ಸರ್ಕಾರ ಲಾಕ್ ಡೌನ್ ಮುಂದುವರಿಸಿದರೆ, ಜಿಲ್ಲಾಡಳಿತ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಕೊರೊನಾ ವೈರಸ್ ಹಿನ್ನೆಲೆ ಜಗಳೂರು ತಾಲ್ಲೂಕಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಂತರ ಮಾತನಾಡಿದ ಅವರು, ಲಾಕ್ ಡೌನ್ ಮುಂದುವರೆಯುವ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ. ಲಾಕ್ ಡೌನ್ ಮುಂದುವರಿಸಿದರೆ ಜಿಲ್ಲಾಡಳಿತ ಸಕಲ ರೀತಿ ಸಜ್ಜಾಗಿದೆ ಎಂದರು.
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ ಚಿಂತನೆ
ದಾವಣಗೆರೆಯಲ್ಲಿ ಯಾವೂದೇ ಕೋವಿಡ್ ಪ್ರಕರಣ ಇಲ್ಲದ ಹಿನ್ನಲೆ. ಗ್ರೀನ್ ಜೋನ್ ಗೆ ಶಿಫಾರಸ್ಸು ಮಾಡಲಾಗುವುದು. ಅಗತ್ಯ ವಸ್ತುಗಳ ಸೇವೆ, ಕೃಷಿ, ಎಪಿಎಂಸಿ ತೆರೆಯಲು ಯಾವುದೇ ಅಡ್ಡಿ ಇಲ್ಲ. ಕಳಪೆ ಬಿತ್ತನೆ ಬೀಜದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಮೆಕ್ಕಜೋಳ ಖರೀದಿ ಕೇಂದ್ರ ತೆರೆಯುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.



