ಡಿವಿಜಿ ಸುದ್ದಿ, ದಾವಣಗೆರೆ: ನಾನೊಬ್ಬ ಬಡ ಕುಟುಂಬದಿಂದ ಬಂದವನು ನನ್ನ ಬಾಲ್ಯದಲ್ಲಿ ಬಂದತಹ ಕಷ್ಟಗಳನ್ನು ಮೆಟ್ಟಿ ನಿಂತು ಜಿಲ್ಲಾಧಿಕಾರಿಯಾಗಿದ್ದೇನೆ. ಎಲ್ಲಿಯವರೆಗೆ ನಾವು ಸಮಾಜಕ್ಕೆ ಉಪಯೋಗವಾಗುವಂತಹ ಕೆಲಸಗಳನ್ನು ನಾವು ಮಾಡುತ್ತೇವೋ ಅಲ್ಲಿಯವರೆಗೆ ಸಮಾಜವು ನಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಹೀಗಾಗಿ ಸಮಾಜ ನೆನಪಿನಲ್ಲಿಟ್ಟುಕೊಳ್ಳುವ ಕೆಲಸ ಮಾಡೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಶನಿವಾರ ಅಪೂರ್ವ ರೆಸ್ಟೋರೆಂಟ್ ನಲ್ಲಿನಡೆದ ದಾವಣಗೆರೆ ಜಿಲ್ಲಾ ಲಾಡ್ಜಿಂಗ್ ಉದ್ದಿಮೆದಾರರ ಸಂಘದಿಂದ ಹಾಗೂ ಹೊಟೇಲ್ ಮಾಲಿಕರ ಸಂಘದಿಂದ ಅಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋವಿಡ್-19ಎಂಬ ವೈರಸ್‍ನಿಂದ ದೇಶವೆ ಲಾಕ್‍ಡೌನ್ ಆದ ಸಂದರ್ಭದಲ್ಲಿ ಸೋಂಕಿತರನ್ನು ಆಸ್ವತ್ರೆಯಲ್ಲಿಡಲು ಸಾಲದೆ ಬೆಡ್‍ಗಳ ಕೊರತೆ ಎದುರಾಯಿತು ಆಗ ನಮ್ಮ ನೆರವಿಗೆ ಬಂದವರು ಹೊಟೇಲ್ ಮಾಲೀಕರ ಸಂಘ ಹಾಗೂ ಲಾಡ್ಜ್ ಮಾಲೀಕರು. ಮೊದಮೊದಲು ಮಾಲೀಕರು ಭಯ ಭೀತಿಗೊಂಡಿದ್ದರು ನಂತರ ಸಭೆ ಮಾಡಿ ಪರಿಸ್ಥಿತಿ ಅವರಿಗೆ ವಿವರಿಸಿದಾಗ ಧಾರಳವಾಗಿ ಸೋಂಕಿತರಿಗೆ ಲಾಡ್ಜ್, ರೂಂ, ಹಾಗೂ ಬೆಡ್‍ಗಳ ವ್ಯವಸ್ಥೆ ಮಾಡಿಕೊಟ್ಟರು. ದಾವಣಗೆರೆ ಇದು ದಾನಿಗಳ ಊರು. ಇಲ್ಲಿ ದಾನಿಗಳಿಗೆ ಬರವಿಲ್ಲ ಎಂದು ಹೊಟೇಲ ಮಾಲಿಕರಿಗೆ ಅಭಿನಂದನೆ ತಿಳಿಸಿದರು.
ನಮ್ಮ ಸಮಾಜವು ತುಂಬಾ ಒಳ್ಳೆಯ ಗುಣಮಟ್ಟದಲ್ಲಿದೆ. ನಾವು ಅದನ್ನು ಒಳ್ಳೆಯ ಕಣ್ಣಿನಿಂದ ನೋಡಿದರೆ ನಮಗೆ ಶುಭ್ರವಾಗಿ ಕಾಣುತ್ತದೆ ಎಲ್ಲಿಯವರೆಗೆ ನಾವು ಸಮಾಜಕ್ಕೆ ಉಪಯೋಗವಾಗುವಂತಹ ಕೆಲಸಗಳನ್ನು ನಾವು ಮಾಡುತ್ತೇವೋ ಅಲ್ಲಿಯವರೆಗೆ ಸಮಾಜವು ನಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ.
ದಾವಣಗೆರೆ ಜಿಲ್ಲೆಯ ಪ್ರತಿ ಹಳ್ಳಿಯಲ್ಲಿಯು ಇಂದು ನನ್ನನು ಗುರುತಿಸಿ ಅಷ್ಟೆ ಪ್ರೀತಿಯಿಂದ ಹಳ್ಳಿಯ ಜನರು ನನ್ನನ್ನು ಮಾತಹಳ್ಳಿಯ ಒಬ್ಬ ಗ್ರಾಮಸೇವಕನಿಂದ ಹಿಡಿದು ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿಗಳು, ಕೊರೊನಾ ವಾರಿಯರ್ಸ್, ಕಮಾಂಡರ್‍ಗಳು ನನಗೆ ಬೆಂಬಲ ನೀಡಿದ್ದಾರೆ. ದಾವಣಗೆರೆ ಜಿಲ್ಲೆ ಸೋಂಕು ತಡೆಗಟ್ಟುವಲ್ಲಿ ಶ್ರಮಿಸುತ್ತಿದೆ ಎಂದು ಜನನಾಯಕರು ಮಾತನಾಡುತ್ತಿದ್ದಾರೆ ಇದಕ್ಕಿಂತ ಸೌಭಾಗ್ಯ ನನಗೆ ಮತ್ತೊಂದಿಲ್ಲ ಎಂದರು.
ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದಜ್ಜಿ ಮಾತನಾಡಿ, ಕೋವಿಡ್-19 ಎಂಬ ಸಮುದ್ರದಲ್ಲಿ ನಮ್ಮ ಕೆಲಸಗಳಿಗೆ ಬೆನ್ನು ತಟ್ಟಿ ನಡೆಸುವ ನಾವಿಕ ನಮ್ಮ ಜಿಲ್ಲಾಧಿಕಾರಿ ಅವರು ರಾತ್ರಿ ಸತತ 3 ಗಂಟೆಗಳವರೆಗೂ ನಮಗೆ ಮಾರ್ಗದರ್ಶನ ನೀಡಿರುವ ಸರಳಜೀವಿ ಎಂದರು.
ಲಾಡ್ಜಿಂಗ್ ಮಾಲೀಕರ ಸಂಘದ ಗೌರವಾಧ್ಯಕ್ಷರಾದ ಅಣಬೇರು ರಾಜಣ್ಣ ಮಾತನಾಡಿ, ಜಿಲ್ಲಾಧಿಕಾರಿಗಳು ನಮ್ಮ ಜೊತೆ ಸಭೆ ನಡೆಸಿದಾಗ ಲಾಡ್ಜ್ ಹಾಗೂ ಹೊಟೇಲ್ ಮಾಲಿಕರಿಗೆ ಭಯದ ಛಾಯೆ ಮೂಡಿತ್ತು. ನಂತರದ ದಿನಗಳಲ್ಲಿ ನಮ್ಮ ಎಲ್ಲ ಬೀಗದ ಕಿಲಿ ಕೈಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದೆವು ಎಂದು ಹೇಳಿದರು.
ಯಾವ ರೋಗಿಗೂ ಸಹ ತೊಂದರೆಯಾಗದಂತೆ ಬೇಡ್‍ಶಿಟ್ ವ್ಯವಸ್ಥೆ, ರೂಂ ವ್ಯವಸ್ಥೆ ಒದಗಿಸಿಕೊಟ್ಟಿದೇವೆ ಸಮಾಜ ಕಷ್ಟ ಕಾಲದಲ್ಲಿ ಇರಬೇಕಾದರೆ ಕರುಣೆ ತೋರಿಸುವುದು ನಮ್ಮ ಹುಟ್ಟುಗುಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ 2 ಲಕ್ಷ ದೇಣಿಗೆ ನೀಡಿದ್ದು. ಹಾಗೂ 3 ಲಕ್ಷಕ್ಕೂ ಹೆಚ್ಚಿನ ಬಡವರು, ನಿರ್ಗತಿಕರಿಗೆ ಕಿಟ್ ವಿತರಣೆ ಮಾಡಿದ್ದೇವೆ. ನಮ್ಮ ಎಲ್ಲಾ ಕೆಲಸಗಳಿಗೂ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಪಾಲಿಕೆ ಆಯುಕ್ತರು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಟೇಲ್ ಮಾಲಿಕರ ಸಂಘದ ಅಧ್ಯಕ್ಷರಾದ ಮೋತಿ ಆರ್ ಪರಮೇಶ್ವರಪ್ಪ, ಕಾರ್ಯದರ್ಶಿ ಬಿ.ಕೆ ಸುಬ್ರಮಣ್ಯ, ಹಾಗೂ ಹೊಟೇಲ್ ಮಾಲಿಕರ ಸಂಘದ ಸದ್ಯಸ್ಯರು ಉಪಸ್ಥಿತರಿದ್ದರು.