ಡಿವಿಜಿ ಸುದ್ದಿ, ದಾವಣಗೆರೆ: ನಗರದಲ್ಲಿ 40 ರಿಂದ 50 ಜಿಮ್ ಗಳಿದ್ದು,ಜಿಮ್ ನಂಬಿಕೊಂಡಿದ್ದ ಟ್ರೈನರ್ ಹಾಗೂ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಜೂನ್ 08 ರಿಂದ ಜಿಮ್ ಪ್ರಾರಂಭಿಸಲು ಅನುಮತಿ ನೀಡಬೇಕು ಎಂದು ಜಿಮ್ ಮಾಲೀಕ ಸಾಯಿನಾಥ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ಜಿಮ್ ಮಾಲೀಕರು ಬಾಡಿಗೆ, ವಿದ್ಯುತ್ ಬಿಲ್, ಸಾಲ ಕಟ್ಟಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರದ ಎಲ್ಲಾ ಮಾರ್ಗ ಸೂಚಿಯನ್ನು ಅನುಸರಿಸಲು ಜಿಮ್ ಮಾಲೀಕರು ತಯಾರಿದ್ದು, ಸರ್ಕಾರ ಜಿಮ್ ತೆರೆಯಲು ಅವಕಾಶ ನೀಡಬೇಕು ಎಂದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಮಾತನಾಡಿ, ಜಿಮ್ ಪ್ರಾರಂಭಿಸಲು ಅವಕಾಶ ಮಾಡಿಕೊಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಲಾಗಿದೆ. ಜೂನ್ 08 ರಂದು ಜಿಮ್ ತೆರೆಯಲು ಅವಕಾಶ ಕಲ್ಪಿಸ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಟ್ರೈನರ್ ಶಿವರಾಜ್, ಫಕೃದ್ದೀನ್, ಶಿವು ಪೂಜಾರಿ, ಶ್ರೀರಕ್ಷ ಉಪಸ್ಥಿತರಿದ್ದರು.



