ಡಿವಿಜಿ ಸುದ್ದಿ, ದಾವಗೆರೆ: ನಗರ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಗೃಹಶೋಭೆ ಗೃಹ ಬಳಕೆ ವಸ್ತು ಪ್ರದರ್ಶನವನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಚಾಲನೆ ನೀಡಿದರು. ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ .ಶೆಟ್ಟಿ ಸಾಥ್ ನೀಡಿದರು.

ಒಂದೇ ಸೂರಿನ ಅಡಿಯಲ್ಲಿ 100ಕ್ಕೂ ಹೆಚ್ಚು ಸ್ಟಾಲ್ ಗಳಲ್ಲಿ ಗೃಹ ಬಳಕೆಗೆ ಅಗತ್ಯವಾದ ವಸ್ತುಗಳು ಲಭ್ಯವಿದ್ದು, ನಿಮ್ಮ ಕೈಗಿಟುಕುವ ದರದಲ್ಲಿ ವಸ್ತುಗಳು ದೊರೆಯಲಿವೆ. ಪ್ರದರ್ಶನ ಮೇಳವು ಫೆ.18 ರಿಂದ ಮಾರ್ಚ್ 02 ವರೆಗೆ 14 ದಿನಗಳ ಕಾಲ ನಡೆಯಲಿದೆ.

ಪ್ರತಿ ದಿನ ಬೆಳಗ್ಗೆ 11 ರಿಂದ ರಾತ್ರಿ 09 ಗಂಟೆ ವರೆಗೆ ಪ್ರದರ್ಶನ ನಡೆಯಲಿದೆ. ಪ್ರದರ್ಶನಕ್ಕೆ ಚಾಲನೆ ನೀಡಿದ ನಂತರ ಯಶೋಧಮ್ಮ ಮರುಳಪ್ಪ ಪ್ರದರ್ಶನ ಮೇಳದ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು.



