ಡಿವಿಜಿ ಸುದ್ದಿ, ದಾವಣಗೆರೆ: ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರಿಗೆ ಆಹಾರವನ್ನು ಕಳೆದ 15 ದಿನಗಳಿಂದ ವಿತರಿಸಲಾಗುತ್ತಿದೆ.
ಕೊರೊನಾ ವೈರಸ್ ಲಾಕ್ ಡೌನ್ ಪರಿಣಾಮ ಹೋಟೆಲ್ ಲಾಕ್ ಆಗಿರುವುದರಿಂದ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ 4 ಬಳಿ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು. ಲಾರಿ, ಕಾರು ಸೇರಿದಂತೆ ಎಲ್ಲಾ ವಾಹನ ಸವಾರಿಗೂ ಆಹಾರ ವಿತರಿಸಲಾಯಿತು.

ಈ ಸಂದರಗ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಎ.ಎಂ . ಶಿವಕುಮಾರ್ , ಕಾರ್ಯದರ್ಶಿ ಅನಿಲ್ ಬಾರಂಗಲ್ , ಪೃಥ್ವಿ ಬಾದಾಮಿ , ಶೇಷಚಲಾ , ವಸಂತರಾಜು , ಗಾಯ್ಕವಾಡ್ ಸಂತೋಷ , ಶ್ರೀ ಕಾಂತ್ .ಕೆ.ಎಂ, ರಜತ್, ನಟರಾಜ್ , ಹೇಮ ಚಂದ್ರ ಜೈನ್ , ಮೋಹನ್ ಕುಮಾರ್, ಟಿ ಕರಿಬಸಪ್ಪ , ಗೋಪಾಲಕೃಷ್ಣ, ಪರಶುರಾಮ, ಆನಂದ ಜ್ಯೋತಿ , ಡಾ. ಶಿಲ್ಪಶ್ರೀ ಉಪಸ್ಥಿತರಿದ್ದರು.



