ಡಿವಿಜಿ ಸುದ್ದಿ, ದಾವಣಗೆರೆ: ಕೋವಿಡ್ – 19 ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಘೋಷಿಸಲಾಗಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ 150, ವಿಶೇಷ ಚೇತನ ಶಾಲೆಗಳಾದ ಮೌನೇಶ್ವರಿ ಶಾಲೆಯಿಂದ 100, ಆಶಾಕಿರಣ ಶಾಲೆಯಿಂದ 25 ಹಾಗೂ ಗಾಯತ್ರಿ ಗ್ರಾಮೀಣ ವಿದ್ಯಾಸಂಸ್ಥೆಯಿಂದ 25 ಆಹಾರದ ಕಿಟ್‍ಗಳನ್ನು ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ನೀಡಲಾಯಿತು.
ಈ ವೇಳೆ ಈ ಸಂಸ್ಥೆಗಳ ಪದಾಧಿಕಾರಿಗಳಾದ ಗೋಪಾಲಪ್ಪ, ರುದ್ರಮುನಿ, ಮರಿಯಾಚಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್, ಜಿಲ್ಲಾ ಅಂಗವಿಕಲರ ಇಲಾಖಾ ಅಧಿಕಾರಿ ಶಶಿಧರ್ ಇದ್ದರು.