ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್- 19 ಪರೀಕ್ಷಾ ಲ್ಯಾಬ್ ತೆರೆಯಲು 90 ಲಕ್ಷ ಅನುದಾನ ಮಂಜೂರಾಗಿದ್ದು, ತಾಂತ್ರಿಕ ಕಾರಣದಿಂದ ಕೋವಿಡ್ ಲ್ಯಾಬ್ ಆರಂಭ ವಿಳಂಬವಾಗುತ್ತಿದೆ. ಮೇ. 4ರೊಳಗೆ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 30 ರಂದು ಎಸ್.ಎಸ್. ಹೈಟೆಕ್‌ನಲ್ಲಿ ಕೋವಿಡ್ ಪರೀಕ್ಷೆ ಲ್ಯಾಬ್ ಆರಂಭಗೊಳಲಿದೆ. ಪಾಲಿಕೆಯಿಂದ 26 ಸಾವಿರ ಆಹಾರ ಕಿಟ್ ವಿತರಿಸಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ರೂ. 1.10 ಕೋಟಿ ಅನುದಾನ ವೆಚ್ಚವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 83 ಸಾವಿರ ನೋಂದಾಯಿತ ಕಾರ್ಮಿಕರಿದ್ದಾರೆ. ಈಗಾಗಲೇ 71 ಸಾವಿರ ಕಾರ್ಮಿಕರಿಗೆ ಖಾತೆಗೆ ತಲಾ ರೂ. 2,000 ರೂಪಾಯಿಗಳಂತೆ ಒಟ್ಟು 14.2 ಕೋಟಿ ಜಮೆಯಾಗಿದೆ. ಇನ್ನುಳಿದ 12 ಸಾವಿರ ಕಾರ್ಮಿಕರ ಬ್ಯಾಂಕ್ ಖಾತೆ ಸಂಖ್ಯೆ ಕೇಳಿದ್ದೇವೆ. ಶೀಘ್ರವೇ ಅವರ ಖಾತೆಗೂ ಹಣ ಪಾವತಿಸಲಾಗುವುದು. ಜಗಳೂರಿನಲ್ಲಿ ಕುಡಿವ ನೀರಿಗೆ ಆದ್ಯತೆ ನೀಡಲು ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ಕಳೆದ 28 ದಿನಗಳಿಂದ ಯಾವುದೇ ಕರೋನಾ ಪಾಸಿಟೀವ್ ಪ್ರಕರಣ ಪತ್ತೆಯಾಗಿಲ್ಲ ಎಂದು ತಿಳಿಸಿದರು.



