Connect with us

Dvgsuddi Kannada | online news portal | Kannada news online

ಜನ ಸ್ಪಂದನ ಸಭೆಯಿಂದ ಎಷ್ಟು ಸಮಸ್ಯೆ ಪರಿಹಾರ ಸಿಕ್ಕಿದೆ ಮಾಹಿತಿ ಕೊಡಿ: ಜಿಲ್ಲಾಧಿಕಾರಿ

ದಾವಣಗೆರೆ

ಜನ ಸ್ಪಂದನ ಸಭೆಯಿಂದ ಎಷ್ಟು ಸಮಸ್ಯೆ ಪರಿಹಾರ ಸಿಕ್ಕಿದೆ ಮಾಹಿತಿ ಕೊಡಿ: ಜಿಲ್ಲಾಧಿಕಾರಿ

ಡಿವಿಜಿ ಸುದ್ದಿ, ದಾವಣಗೆರೆ: ಜನಸ್ಪಂದನ ಸಭೆಯನ್ನು ಕಳೆದ ಆಗಸ್ಟ್ ತಿಂಗಳಿಂದ ಆರಂಭಿಸಿದ್ದು,  ಈವರೆಗೆ ಎಷ್ಟು ಜನರ ಸಮಸ್ಯೆಗಳಿಗೆ ಪರಿಹರ ಸಿಕ್ಕಿದೆ ಎಂಬುದರ ಕುರಿತು ಎಲ್ಲಾ ಇಲಾಖೆಯ ಅಧಿಕಾರಿಗಳು  ಮುಂದಿನ ವಾರದ ಸಭೆಯಲ್ಲಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚಿಸಿದರು.

ಸೋಮವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಈ ಸಭೆ  ಕೇವಲ ತೋರ್ಪಡಿಕೆಗೆ ಮಾಡುವ ಸಭೆ ಆಗಬಾರದು. ಪ್ರತಿ ವಾರದ ಸಭೆಯಿಂದ ಇಲ್ಲಿವರೆಗೆ  ಎಷ್ಟು ಜನರ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಅನ್ನೋ ಮಾಹಿತಿ ನೀಡಿ. ಇಲಾಖೆ ಅಧಿಕಾರಿಗಳು  ಬೇಜವಾಬ್ದಾರಿಯಿಂದ ಕೆಲಸ ಮಾಡದೆ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು.

ಎಲ್ಲಾ ಇಲಾಖೆಯವರು ಸಾರ್ವಜನಿಕರ ಕೆಲಸವನ್ನು ಸೂಕ್ತ ಸಮಯಕ್ಕೆ ನಿರ್ವಹಿಸದಿದ್ದರೆ, ಜನ ಜಿಲ್ಲಾಧಿಕಾರಿಗಳ ಕಚೇರಿಗೆ ಈ ರೀತಿ ಬಂದು ದೂರುಗಳನ್ನು ನೀಡುತ್ತಿರಲಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳೆಲ್ಲರೂ ಜನರ ಸಮಸ್ಯೆ ಮತ್ತು ತೊಂದರೆಗಳಿಗೆ ವೇಗವಾಗಿ ಸ್ಪಂದಿಸಿ ಜನರ ಕೆಲಸವಾಗಬೇಕೆಂಬ ಉದ್ದೇಶದಿಂದಲೇ ಈ ಸಭೆಯನ್ನು ಪ್ರತಿ ವಾರ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶವನ್ನು ಲೆಕ್ಕಿಸದೇ ಅಸಡ್ಡೆ ತೋರುತ್ತಿರುವುದನ್ನು ನಾವು ಸಹಿಸುವುದಿಲ್ಲ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ.ಜಿ, ಉಪವಿಭಾಗಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರಸ್ವಾಮಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ದಾವಣಗೆರೆ ತಾಲ್ಲೂಕು ತಹಶೀಲ್ದಾರರು ಉಪಸ್ಥಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top